ಮಂಗಳವಾರ, ಏಪ್ರಿಲ್ 13, 2021
24 °C

ಅಣ್ವಸ್ತ್ರ ಸ್ಪರ್ಧೆ: ಪಾಕ್‌ಗೆ ಇಚ್ಛೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಏಷ್ಯಾದಲ್ಲಿ ಶಾಂತಿಯುತ ಸಹಬಾಳ್ವೆ ನಡೆಸುವುದೇ ಪಾಕಿಸ್ತಾನದ ನೀತಿ, ಅಣ್ವಸ್ತ್ರ ಸ್ಪರ್ಧೆಗೆ ಇಳಿಯುವುದಕ್ಕೆ ತಮ್ಮ ದೇಶ ಇಚ್ಛಿಸುವುದಿಲ್ಲ ಎಂದು ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕ್ವಾಮಾರ್ ಸುಲೇಮಾನ್ ಹೇಳಿದ್ದಾರೆ.

 

ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಪಾಕಿಸ್ತಾನಕ್ಕೆ ಮನಸ್ಸಿಲ್ಲದಿದ್ದರೂ ದಕ್ಷಿಣ ಏಷ್ಯಾದಲ್ಲಿನ ಬೆಳವಣಿಗೆಗಳ ಬಗ್ಗೆ ದೇಶ ಉಪೇಕ್ಷೆಯಿಂದ ಇರಲು ಸಾಧ್ಯವಿಲ್ಲ. ಒತ್ತಡದ ಕಾರಣಕ್ಕೇ ಪಾಕಿಸ್ತಾನ ಇಂದು ಅಣ್ವಸ್ತ್ರ ಹೊಂದಿದೆ ಎಂದು ಅವರು  ಇಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶವೊಂದರಲ್ಲಿ ತಿಳಿಸಿದ್ದಾರೆ ಎಂದು ‘ದಿ ಡೈಲಿ ಟೈಮ್ಸ್’ ವರದಿ ಮಾಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.