ಶುಕ್ರವಾರ, ಏಪ್ರಿಲ್ 23, 2021
31 °C

ಅತಂತ್ರವಾದ ಸಾರ್ವಜನಿಕ ಗ್ರಂಥಾಲಯ

ಪ್ರಜಾವಾಣಿ ವಾರ್ತೆ ಎಂ.ವಿ.ಗಾಡದ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಗ್ರಂಥಗಳು ಸಮಾಜದ ಆತ್ಮವಿದಂತೆ. ಅವು ಒಂದು ಕಾಲದಿಂದ ಇನ್ನೂಂದು ಕಾಲಕ್ಕೆ ಮನುಕುಲವನ್ನು ಸಶಕ್ತವಾಗಿ ಕರೆದೊಯ್ಯುವ ವಾಹಕಗಳಾಗಿವೆ. ಅಂತಹ ಗ್ರಂಥಗಳಿಗೆ ಸೂಕ್ತ ಕಟ್ಟಡವಿಲ್ಲದೆ ಸಂರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿ ಹೋಗುವಂತಾಗಿದೆ.ಸರ್ಕಾರ ಪಟ್ಟಣ ಹಾಗೂ ನಗರಗಳು ಸುಂದರವಾಗಿರಬೇಕು ಹಾಗೆಯೇ  ಶೈಕ್ಷಣಿಕ ರಂಗದಲ್ಲಿ ರಾಜ್ಯವು ಕೂಡಾ ಮುಂಚೂಣಿ ಯಲ್ಲಿರಬೇಕೆಂದು ಎಲ್ಲ ನಗರ ಪಟ್ಟಣಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ. ಆಸಕ್ತರು ಜೀವಿಗಳು ವಿದ್ಯಾರ್ಥಿಗಳು ಓದುಗರು ದಿನನಿತ್ಯ ಸಾವಿರಾರು ಜನರು ಬರುತ್ತಾರೆ. ಅಂತಹ ಜ್ಞಾನ   ದೇಗುಲ ಸುಸಜ್ಜಿತವಾದ ಕಟ್ಟಡವಿಲ್ಲದೆ ಕಲುಷಿತ ವಾತಾವರಣದಿಂದ ಕೂಡಿದೆ.ಇಲ್ಲಿನ ಸಾರ್ವಜನಿಕರ ಗ್ರಂಥಾಲಯ ಕಟ್ಟಡ ಈಗ ದುರಸ್ಥಿಯಲ್ಲಿದ್ದು, ಸುಮಾರು ವರ್ಷಗಳಿಂದ ನೂತನ ಕಟ್ಟಡದ ಭಾಗ್ಯ ಇನ್ನು ಕೂಡಿ ಬಂದಿಲ್ಲ. ಹೀಗಾಗಿ ಸುಮಾರು ತಿಂಗಳಿನಿಂದ ಸಂತೆ ಮೈದಾನದಲ್ಲಿರುವ  ಶರೀಫ್ ಶಿವಯೋಗಿ ಭವನದಲ್ಲಿ ಸ್ಥಳಾಂತರ ಗೊಂಡಿದೆ. ಈ ಸಭಾಭವನದಲ್ಲಯೊ ಸಹ ಸ್ಥಳದ ಕೊರತೆ ಇರುವುದರಿಂದ ಗ್ರಂಥಾಲಯದ ಸಾಮಗ್ರಿಗಳನ್ನು ಇಡಲು ಸಾಧ್ಯವಿಲ್ಲದ ಕಾರಣ ಬೆಲೆಬಾಳುವ ಗ್ರಂಥಗಳನ್ನು ಅನಿವಾರ್ಯವಾಗಿ ನೆಲದ ಮೇಲೆ ಇಡುವಂತಾಗಿದೆ. ಅದರಿಂದ ಓದುಗರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ಸಾರ್ವಜನಿಕ ಗ್ರಂಥಾಲಯ ಹಲವಾರು ವರ್ಷದಿಂದ ಶಿಥಿಲಗೊಂಡಿದ್ದು, ಅದನ್ನು ದುರಸ್ತಿ ಮಾಡದೇ ಹಾಗೇ ಬಿಟ್ಟಿದ್ದಾರೆ. ಶಿಥಿಲಗೊಂಡ ಗ್ರಂಥಾಲದ ಸುತ್ತಲೂ  ಗೋಡೆ ಇರುವುದರಿಂದ ಅಲ್ಲಿ ರಾತ್ರಿಯಾದರೆ ಸಾಕು, ಪುಂಡಪುಡಾರಿಗಳು ಔತಣಕೂಟ, ಕುಡುಕರ ಹಾವಳಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗುತ್ತಿದೆ.  ಹೀಗಾಗಿ ಇಲ್ಲಿ ಪ್ರಜ್ಞಾವಂತ ನಾಗರಿಕರು ಓಡಾಡದಂತಾಗಿದೆ ಎಂದು ನಿತ್ಯ ಗ್ರಂಥಾಲಯದಲ್ಲಿ ಓದುಗ ಪ್ರವೀಣಕುಮಾರ ಆತಂಕ ವ್ಯಕ್ತಪಡಿಸಿದರು.ಶರೀಫ್ ಶಿವಯೋಗಿ ಭವನವನ್ನು ಸರ್ಕಾರ ಸಭೆ ಸಮಾರಂಭಗಳನ್ನು ನಡೆಸಲು ನಿರ್ಮಿಸ ಲಾಗಿದೆ. ಆದರೆ ಈಗ ಅಲ್ಲಿ ತಾಲ್ಲೂಕು ಸಾರ್ವಜನಿಕ ಕೇಂದ್ರ ಗ್ರಂಥಾಲಯ ತಾತ್ಕಾಲಿಕವಾಗಿ ಸ್ಥಾಪನೆಗೊಂಡಿದ್ದು, ಅಲ್ಲಿ  ಸರಿಯಾದ ಪುಸ್ತಕಗಳನ್ನು ಜೋಡಿಸಿಡಲು    ಸ್ಟ್ಯಾಂಡ್‌ಗಳಿಲ್ಲ. ಹೀಗಾಗಿ ನೆಲದ ಮೇಲೆ ಇಟ್ಟಿರುವ ಪುಸ್ತಕಗಳು ದೂಳು ಬಿದ್ದು ಸಂಪೂರ್ಣ ಹಾಳಾಗುತ್ತಿವೆ.ಶಿವಯೋಗಿ ಸಭಾಭವನದ ಸುತ್ತಲೂ ಹಂದಿಗಳು ವಾಸಿಸುವುದು ಮತ್ತು ಶೌಚಾಲಯ ಗಳಿಲ್ಲದೆ ಜನರು ಅಲ್ಲಿಯೇ  ಮಲ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಗ್ರಾಮೀಣ ಭಾಗದಿಂದ ಗ್ರಂಥಾಲಯಕ್ಕೆ ಬರುವ ಮಹಿಳೆಯರಿಗೆ, ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಸಂತೆ ದಿನವಂತೂ ಗ್ರಂಥಾಲಯದಲ್ಲಿ ಓದುಗರಿಗೆ ವಾಹನ  ಭರಾಟೆಯಿಂದ ಓದುಗರ ಏಕಾಗ್ರತೆ ಹಾಳು ಮಾಡಿದಂತಾಗುತ್ತದೆ.ತಾಲ್ಲೂಕು ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶಿಥಿಲಾ ವ್ಯವಸ್ಥೆಯಲ್ಲಿರುವ ಕಟ್ಟಡವನ್ನು ದುರಸ್ತಿ ಮಾಡಿಸಲು ಜಿ.ಪಂ. ವತಿಯಿಂದ 16 ಲಕ್ಷ ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಂಥಾಲಯ ಇಲಾಖೆ 5 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಪುರಸಭೆ ವತಿಯಿಂದ 5 ಲಕ್ಷ ಹಾಗೂ ಶಾಸಕರ ನಿಧಿಯಿಂದ ರೂ 6 ಲಕ್ಷ ಮಂಜೂರಾತಿಗಾಗಿ ಮನವಿ ಮಾಡಲಾಗಿದೆ.1.5 ಕೋಟಿ ಅನುದಾನ ಬಿಡುಗಡೆ ಮನವಿ
: ರಾಜ್ಯದ ಇತರ ತಾಲ್ಲೂಕು ಕೇಂದ್ರಗಳಲ್ಲಿ 1.5ಕೋಟಿ ರೂಗಳ ವೆಚ್ಚ ಮಾಡುವ ಮೂಲಕ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಅದರಂತೆ ಶಿಗ್ಗಾವಿ ತಾಲ್ಲೂಕು ಕೇಂದ್ರದಲ್ಲಿಯೂ ಸಹ 1.5 ಕೋಟಿ ರೂಗಳನ್ನು ಬಿಡುಗಡೆ ಮಾಡುವ ಮೂಲಕ ಡಿಜಿಟಲ್ ಗ್ರಂಥಾಲಯ ನಿರ್ಮಿಸಬೇಕು. ಅಲ್ಲದೆ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ನೂತನ ಗ್ರಂಥಾಲಯ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಮತ್ತು ಜಾಗೃತಿ ಸಂಘದ ರಾಜ್ಯಾಧ್ಯಕ್ಷ ಫಕ್ಕಿರೇಶ ಶಿಗ್ಗಾಂವ ಸಚಿವರಲ್ಲಿ ಮನವಿ ಮಾಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.