ಮಂಗಳವಾರ, ಸೆಪ್ಟೆಂಬರ್ 17, 2019
27 °C

ಅತಂತ್ರ ಸ್ಥಿತಿಯಲ್ಲಿ ಫಲಾನುಭವಿಗಳು

Published:
Updated:
ಅತಂತ್ರ ಸ್ಥಿತಿಯಲ್ಲಿ ಫಲಾನುಭವಿಗಳು

ಶಹಾಪುರ: ಸರ್ಕಾರದ ಹಲವು ತಿಂಗಳ ಹಿಂದೆ ನೀಡಿದ ಸುತ್ತೋಲೆಯಂತೆ ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಬಗೆಯ ಮಾಸಾಶನದ ಫಲಾನುಭವಿಗಳ ಪಟ್ಟಿಯನ್ನು ಪುನರ್ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ನೀಡಿದ ಸುತ್ತೋಲೆಯು ನಿಜವಾದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ. ಅದರಲ್ಲಿ 6038 ಫಲಾನುಭವಿಗಳು ಅತಂತ್ರಸ್ಥಿತಿಯಲ್ಲಿದ್ದಾರೆ.ತಾಲ್ಲೂಕಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಪ್ರತಿ ತಿಂಗಳು 4.73ಕೋಟಿ ರೂಪಾಯಿ ಅನುದಾನ ಬರುತ್ತದೆ ಎಂದು ಉಪಖಜಾನೆಯ ಮೂಲಗಳಿಂದ ತಿಳಿದು ಬಂದಿದೆ.ತಾಲ್ಲೂಕಿನಲ್ಲಿ ವಿಧವಾ ವೇತನ, ಅಂಗವಿಕಲ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟು 21,496 ಫಲಾನುಭವಿಗಳಿದ್ದಾರೆ. ಅದರಲ್ಲಿ 19,392 ಅರ್ಜಿಗಳ ಪರಿಶೀಲನೆಯ ಕಾರ್ಯ ಮುಕ್ತಾಯವಾಗಿದೆ. ಅದರಲ್ಲಿ ಸಮೀಕ್ಷೆಯಿಂದ ಹೊರಬಂದ ಅಂಶವೆಂದರೆ 6038 ಫಲಾನುಭವಿಗಳ ಪೈಕಿ 5056 ಫಲಾನುಭವಿಗಳ ಮಾಹಿತಿ ಲಭ್ಯವಾಗಿಲ್ಲ. 512 ಫಲಾನುಭವಿಗಳ ಡಬಲ್ ಎಂಟ್ರಿ, 317 ಮರಣ ಹೊಂದಿದ್ದಾರೆ. ಅವಧಿ ಮುಗಿದ ಕಾರಣ 132 ಅರ್ಜಿಗಳನ್ನು ರದ್ದುಗೊಳಿಸಲಾಗಿದೆ. ಹೆಚ್ಚಿನ ಆದಾಯ ವಿರುವ 21ಫಲಾನಭವಿಗಳನ್ನು ಗುರುತಿಸಲಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.ಸಮೀಕ್ಷೆಯ ಕಾರ್ಯವನ್ನು ಸಮರ್ಪಕವಾಗಿ ಕಂದಾಯ ಇಲಾಖೆಸಿಬ್ಬಂದಿ ನಿರ್ವಹಿಸಿಲ್ಲವೆಂದು ಅತಂತ್ರ ಸ್ಥಿತಿಯಲ್ಲಿರುವ ಫಲಾನುಭವಿ ಯೊಬ್ಬರು ಆರೋಪಿಸಿದ್ದಾರೆ.ಕಳೆದ ಐದಾರು ತಿಂಗಳಿಂದ ಮಾಸಾಶನ ಬಂದಿಲ್ಲ. ಅದರ ಮೇಲೆ ಜೀವ ಇಟ್ಟುಕೊಂಡು ಬದುಕು ಮುಸ್ಸಂಜೆಯ ಜೀವಗಳಿಗೆ ಮತ್ತುಷ್ಟು ತೊಂದರೆಯಾಗಿದೆ ಎಂದು ನೊಂದ ಫಲಾನುಭವಿಯೊಬ್ಬರು ದೂರಿದ್ದಾರೆ.ಅಲ್ಲದೆ ಅಂಚೆ ಕಚೇರಿಯ ಇಲಾಖೆಯ ಕೆಲ ಸಿಬ್ಬಂದಿ ಸಮರ್ಪಕವಾಗಿ ಬರುವ ಮಾಸಾಶವನ್ನು ವಿತರಿಸದೆ ಸತಾಯಿಸುತ್ತಾರೆ ಎಂದು ಫಲಾನುಭವಿಯ ಅಳಲು.ಖೊಟ್ಟಿ ಹಾಗೂ ಅನರ್ಹ ಫಲಾನುಭವಿಗಳ ಸದಸ್ಯರ ಪಟ್ಟಿಯನ್ನು ರದ್ದುಪಡಿಸಿ. ಪರಿಶೀಲನೆಯ ನೆಪದಲ್ಲಿ ಮಾಸಾಶವನ್ನು ತಡೆಹಿಡಿದಿರುವುದು ಸರಿಯಾದ ಕ್ರಮವಲ್ಲ.ನಿಜವಾದ ಫಲಾನುಭವಿಗಳಿಗೆ ಮಾಸಾಶವನ್ನು ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಹತಾಶೆಗೊಂಡ ಫಲಾನುಭವಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Post Comments (+)