ಮಂಗಳವಾರ, ಮೇ 11, 2021
24 °C

ಅತಿಥಿ ಉಪನ್ಯಾಸಕರಿಗೆ ತಿಂಗಳಾಂತ್ಯದಲ್ಲಿ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ ವಿವಿಧ ಸರ್ಕಾರಿ ಪ್ರಥಮದರ್ಜೆ ಕಾಲೇ ಜುಗಳಲ್ಲಿ ಕೆಲಸ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ಇದುವರೆಗೆ ರೂ 52 ಕೋಟಿ ವೇತನ ಬಾಕಿ ಕೊಡಬೇಕಿದ್ದು, ಈ ತಿಂಗಳಾಂತ್ಯದೊಳಗೆ ಮೊದಲ ಕಂತು ಬಿಡುಗಡೆಗೆ ಕ್ರಮ ಕೈಗೊಳ್ಳಲಾ ಗುವುದು' ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಪ್ರಕಟಿಸಿದರು.ಬಸವರಾಜ ಹೊರಟ್ಟಿ, ಪುಟ್ಟಣ್ಣ, ಗಣೇಶ ಕಾರ್ಣಿಕ್, ಮರಿತಿಬ್ಬೇಗೌಡ, ವೈ. ನಾರಾಯಣಸ್ವಾಮಿ, ಡಾ.ಎ. ಎಚ್. ಶಿವಯೋಗಿಸ್ವಾಮಿ ಅವರು ವಿಧಾನ ಪರಿಷತ್ತಿನಲ್ಲಿ ಬುಧವಾರ ಮಂಡಿಸಿದ ಗಮನ ಸೆಳೆಯುವ ಸೂಚನೆ ಮೇಲಿನ ಚರ್ಚೆ ಬಳಿಕ ಸಚಿವರು ಉತ್ತರ ನೀಡಿದರು.`ರಾಜ್ಯದಲ್ಲಿ ಒಟ್ಟಾರೆ 10,500 ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ವೇತನ ನೀಡಲು ರೂ 87 ಕೋಟಿ  ಅಗತ್ಯವಿದೆ. ಆದರೆ, ಬಜೆಟ್‌ನಲ್ಲಿ ರೂ 27 ಕೋಟಿ ಮಾತ್ರ ಇಡಲಾಗಿದೆ. ಹಳೇ ಬಾಕಿ ಮತ್ತು ಹಾಲಿ ವೇತನ ಎರಡಕ್ಕೂ ಸೇರಿ ದೊಡ್ಡ ಮೊತ್ತದ ಅಗತ್ಯವಿದೆ. ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್‌ನಲ್ಲಿ ಅಧಿಕ ಅನುದಾನ ನೀಡುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗಿದೆ' ಎಂದು ವಿವರಿಸಿದರು.`ಹಣಕಾಸು ಇಲಾಖೆಯಿಂದ ಸಮ್ಮತಿ ಪಡೆಯದೆ ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದು, ಅದಕ್ಕೆ ಸೂಕ್ತ ಅನುದಾನದ ವ್ಯವಸ್ಥೆ ಮಾಡಿಕೊಳ್ಳದೆ ಇರುವುದು ಸಮಸ್ಯೆ ಬಿಗಡಾಯಿಸಲು ಕಾರಣ' ಎಂದ ಅವರು, `ಬಾಕಿ ಪಾವತಿಸಿದ ಮೇಲೆ ಅತಿಥಿ ಉಪನ್ಯಾಸಕರಿಗೂ ಪ್ರತಿ ತಿಂಗಳು ವೇತನ ಬಟವಾಡೆ ವ್ಯವಸ್ಥೆ ಮಾಡಲಾಗುವುದು' ಎಂದು ಅವರು ಭರವಸೆ ನೀಡಿದರು.`ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜುಲೈ 15ರೊಳಗೆ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲು ನಿರ್ಧರಿಸಲಾಗಿದೆ. 2009ರಿಂದ ಈಚೆಗೆ ಯಾವುದೇ ಅಗತ್ಯ ತಯಾರಿ ಮಾಡಿಕೊಳ್ಳದೇ 192 ಪದವಿ ಕಾಲೇಜುಗಳನ್ನು ತೆರೆದಿದ್ದರಿಂದ ಸಮಸ್ಯೆ ಎದುರಾಗಿದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.