ಅತಿಥ್ಯ ಅವಕಾಶಗಳ ಕ್ಷೇತ್ರ

7

ಅತಿಥ್ಯ ಅವಕಾಶಗಳ ಕ್ಷೇತ್ರ

Published:
Updated:
ಅತಿಥ್ಯ ಅವಕಾಶಗಳ ಕ್ಷೇತ್ರ

ಎಂ ಎಸ್ ರಾಮಯ್ಯ ಕಾಲೇಜಿನ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗಕ್ಕೆ ಪ್ರವೇಶಾತಿ ಪಡೆದಿರುವ 70 ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮ ಈಚೆಗೆ ಆರಂಭವಾಯಿತು.ಸ್ಟಾರ್‌ವುಡ್ ಹೋಟೆಲ್‌ನ ಜನರಲ್ ಮ್ಯಾನೇಜರ್ ಮಾರ್ಟಿನ್ ವೆಟ್ರಿಚ್ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಮನೀಶ್ ಸಾಧು, ಗೋಕುಲ ಎಜುಕೇಷನ್ ಸೊಸೈಟಿಯ ವೇಣುಗೋಪಾಲ್ ಶಾಸ್ತ್ರಿ ಅತಿಥಿಗಳಾಗಿದ್ದರು.ಪ್ರಾಂಶುಪಾಲ ಅಭೆ ಮ್ಯಾಥ್ಯು ಮಾತನಾಡಿ, ಹೋಟೆಲ್ ಉದ್ಯಮ ಇಂದು ಜಾಗತಿಕ ಮನ್ನಣೆ ಪಡೆದುಕೊಂಡಿದೆ. ಈ ಕೋರ್ಸ್ ಮುಗಿಸಿದವರಿಗೆ ಅತಿಥ್ಯ ಮತ್ತು ಹೋಟೆಲ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ ಎಂದರು.

 

ಮಾರ್ಟಿನ್ ವೆಟ್ರಿಚ್ ಅವರು ಪ್ರಸಕ್ತ ಸನ್ನಿವೇಶದಲ್ಲಿ ಅತಿಥಿ ಸತ್ಕಾರ ಕ್ಷೇತ್ರ ಬೆಳೆಯುತ್ತಿರುವ ಪರಿ, ವ್ಯಾಪಕ ಅವಕಾಶ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry