ಶುಕ್ರವಾರ, ಮಾರ್ಚ್ 5, 2021
27 °C

ಅತಿರುದ್ರ ಮಹಾಯಾಗ ಸಂಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿರುದ್ರ ಮಹಾಯಾಗ ಸಂಪೂರ್ಣ

ಸಿದ್ದಾಪುರ: ತಾಲ್ಲೂಕಿನ ಭಾನ್ಕುಳಿ ಮಠದ ಶಂಕರಗಿರಿಯಲ್ಲಿ ಶಂಕರ ಪಂಚಮಿ ಉತ್ಸವದ ಅಂಗವಾಗಿ  ಬುಧವಾರ ಆಯೋಜಿಸಿದ್ದ ಅತಿರುದ್ರ  ಮಹಾಯಾಗ  ಯಶಸ್ವಿಯಾಗಿ ಪೂರ್ಣಗೊಂಡಿತು.ಯಂತ್ರಾಕಾರದಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗಿದ್ದ ಯಾಗಶಾಲೆಯಲ್ಲಿ ಒಂದು ಪ್ರಧಾನ ಯಜ್ಞಕುಂಡ ಮತ್ತು 121 ಉಪ ಕುಂಡಗಳಲ್ಲಿ 1331 ಋತ್ವಿಜರಿಂದ ರುದ್ರಾ ಧ್ಯಾಯದ ಮೂಲಕ ಈ ಮಹಾಯಾಗ ನಡೆಯಿತು. ಮಧ್ಯಾ ಹ್ನದ ಹೊತ್ತಿಗೆ  ಪೂರ್ಣಾಹುತಿಯೂ ಪೂರ್ಣವಾಯಿತು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ‘ಧರ್ಮವಿರುವಲ್ಲಿ ಏಳಿಗೆ ಇರುತ್ತದೆ. ಅಧರ್ಮವಿದ್ದಲ್ಲಿ ಪತನವಿರುತ್ತದೆ.ಶಂಕರಾಚಾರ್ಯರ ಕಾಲದಲ್ಲಿ ಒಂದು ಶ್ರದ್ಧೆ ಬಿಟ್ಟು ಇನ್ನೊಂದು ಶ್ರದ್ಧೆಯತ್ತ ಜನರು ಹೋಗುತ್ತಿದ್ದರು. ವೈದಿಕ ಧರ್ಮದ ಚೌಕಟ್ಟಿನಿಂದ ಇತರ ಮತಗಳ ಚೌಕಟ್ಟಿನತ್ತ ಜನರು ತೆರಳುತ್ತಿರುವ ಕಾಲ ಅದಾಗಿತ್ತು. ಆದರೆ ಈಗ ಚೌಕಟ್ಟನ್ನೇ ಬಿಟ್ಟು ಹೋಗುವುದನ್ನು ಕಾಣುತ್ತಿದ್ದೇವೆ’ ಎಂದರು.ಹಲವು ಶತಮಾನದಿಂದ ಸಮಾಜ ಪತನದತ್ತ ಸಾಗುತ್ತಿತ್ತು.ಆದರೆ ಈಗ ಸಮಾಜ ಉತ್ಥಾನದ ಕಡೆಗೆ ಹೊರಟಿವುದಕ್ಕೆ ಈ ಕಾರ್ಯಕ್ರಮವೇ ದೊಡ್ಡ ನಿದರ್ಶನ ಎಂದರು.ಪುರೋಹಿತರಿಗೆ ಹೆಣ್ಣು ಕೊಡಿ:  ‘ಪುರೋಹಿತರನ್ನು ಗೌರವಿಸುವುದು ಸಮಾಜದ ಕರ್ತವ್ಯ. ಅವರಿಗೆ ಮಣೆಯೊಂದಿಗೆ ಮನ್ನಣೆಯನ್ನೂ ನೀಡಬೇಕು. ಪುರೋಹಿತರಿಗೆ ಹೆಣ್ಣು ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಪುರೋಹಿತರನ್ನು ಸ್ವಖುಷಿಯಿಂದ ಮದುವೆಯಾಗುವ ಹೆಣ್ಣುಮಕ್ಕಳಿಗೆ ಗುರುಪೀಠದ ವಿಶೇಷ ಆಶೀರ್ವಾದ ದೊರೆಯಲಿದೆ’ ಎಂದರು.ಶೇಷಗಿರಿ ಭಟ್ಟ ಗುಂಜಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪಾದ ಹೆಗಡೆ ಭಾನ್ಕುಳಿ ದಂಪತಿ ಮತ್ತು ಎಂ.ಎನ್.ಭಟ್ಟ ದಂಪತಿ ಫಲ ಸಮರ್ಪಣೆ ಮಾಡಿದರು. ರಾಘವೇಂದ್ರ ಮಧ್ಯಸ್ಥ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.