ಅತಿವೃಷ್ಟಿ ಪರಿಹಾರಕ್ಕೆ ಆಗ್ರಹ

7

ಅತಿವೃಷ್ಟಿ ಪರಿಹಾರಕ್ಕೆ ಆಗ್ರಹ

Published:
Updated:

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಆರ್ಥಿಕ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯ­ಕರ್ತರು, ಮಹಾತ್ಮಗಾಂಧಿ ರಸ್ತೆಯಲ್ಲಿ ತೆರಳಿ, ಕೇಂದ್ರ ಹಾಗೂ ರಾಜ್ಯ ಸರ್ಕಾ­ರದ ವಿರುದ್ಧ ಘೋಷಣೆ ಕೂಗಿದರು.ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ಎಚ್‌.ಎಚ್‌.ದೇವರಾಜ್‌, ಅತಿವೃಷ್ಟಿ­ಯಿಂದ ಆರ್ಥಿಕ ಬೆಳೆಗಳು ಸಂಪೂರ್ಣ­ವಾಗಿ ನೆಲ ಕಚ್ಚಿವೆ. ತೋಟಗಳ ನಿರ್ವಹಣೆ ಮಾಡಲು ಸಾಧ್ಯವಾ­ಗುತ್ತಿಲ್ಲ. ಈಗಾಗಲೇ ಹಾಳಾಗಿರುವ ತೋಟವನ್ನು ಮೊದಲಿನ ಸ್ಥಿತಿಗೆ ತರಲು ಕನಿಷ್ಠ ಐದು ವರ್ಷಗಳು ಬೇಕಾ­ಗುತ್ತಿದ್ದು, ನಿರ್ವಹಣಾ ವೆಚ್ಚ­ನೀಡಲು­ಕೇಂದ್ರ ಮತ್ತು ರಾಜ್ಯಸರ್ಕಾರಗಳು  ಮುಂದಾಗಬೇಕೆಂದು ಅವರು ಒತ್ತಾಯಿಸಿದರು.ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲವರು ಈಗಾಗಲೇ ಮಲೆನಾಡು ಪ್ರದೇಶದಲ್ಲಿ ನಾಶವಾಗಿರುವ ತೋಟಗಳಿಗೆ ಭೇಟಿ ನೀಡಿ, ರೈತರು ಮತ್ತು ಬೆಳೆಗಾರರ ಕಣ್ಣೊರೆಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.ಈ ಭಾಗದ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದು ಬೆಳೆಗಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ಮುಂದಾಗಬೇಕೆಂದು ಮನವಿ ಮಾಡಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೆಂಕಟೇಶ್‌ ಮಾತನಾಡಿ, ರೈತರ ಮತ್ತು ಬೆಳೆಗಾರರ ಸಮಸ್ಯೆಗೆ ಸರ್ಕಾರಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸ­ಬೇಕಾಗುತ್ತದೆ ಎಂದು ಎಚ್ಚರಿಸಿದರು.ಜೆಡಿಎಸ್‌ ಮುಖಂಡ ತೋರಣ­ಮಾವು ಲಕ್ಷ್ಮಣಗೌಡ ಮಾತ­ನಾಡಿ, ಈಗಾಗಲೇ ಬೆಳೆ ಕಳೆದುಕೊಂಡಿರುವ ರೈತರಿಗೆ ಸ್ವಲ್ಪ ಹಣ ನೀಡಿ, ಕೈತೊಳೆದುಕೊಳ್ಳದೆ ಸರಿಯಾದ ಪರಿ­ಹಾರ ನೀಡಬೇಕು ಎಂದು ಒತ್ತಾಯಿಸಿದರು.ಮುಖಂಡ ಕೆ.ಭರತ್‌ ಮಾತನಾಡಿ, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬೆಳೆಗಳು ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ, ಹೆಚ್ಚಿನ ಪರಿಹಾರ ದೊರಕಿಸಲು ಮುಂದಾಗ­ಬೇಕು ಎಂದರು.ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ಆಗುತ್ತಿರುವ ಅಸಹಕಾರ ತಪ್ಪಿಸುವುದು, ಕಾಫಿ ಬೆಳೆಯನ್ನು ವಾಣಿಜ್ಯ ವಲಯದಿಂದ ಮುಕ್ತಗೊಳಿಸಿ ಪಡಿತರ ಧಾನ್ಯ ವಾ್ಯಪ್ತಿಗೆ ತರಬೇಕು. ಸೂರಿಗಾಗಿ ಒತ್ತುವರಿ ಮಾಡಿದವರಿಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಆಗುತ್ತಿ­ರುವ ಕಿರುಕುಳ ತಪ್ಪಿಸಬೇಕು. ಉಚಿತ ಗೊಬ್ಬರ ಮತ್ತು ಕೀಟನಾಶಕ ವಿತರಿಸಿ ತೋಟ ನಿರ್ವಹಣೆಗೆ ಸಹಾಯಧನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಸಾಲ ವಸೂಲಾತಿಗೆ ಬ್ಯಾಂಕುಗಳು ನೀಡುತ್ತಿರುವ ಕಿರುಕುಳ ತಪ್ಪಿಸುವುದು, ಸಣ್ಣ ಮತ್ತು ಅತಿಸಣ್ಣ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ನೆರವಿಗೆ ಮುಂದಾಗ­ಬೇಕೆಂದು ಮನವಿ ಮಾಡಿದರು.ಕೆಲವು ವರ್ತಕರು ಅಂಗಡಿ­ಮುಂಗಟ್ಟು­ಗಳನ್ನು ಮುಚ್ಚಿ ಪ್ರತಿಭಟ­ನೆಗೆ ಬೆಂಬಲ ವ್ಯಕ್ತಪಡಿಸಿದರು.ಪಕ್ಷದ ಮುಖಂಡರಾದ ಎಚ್‌.ಎನ್‌.ಕೃಷ್ಣೇಗೌಡ, ಜಿ.ಎಸ್‌.­ಚಂದ್ರಪ್ಪ, ಹೊಲದಗದ್ದೆ ಗಿರೀಶ್‌, ತಾ.ಪಂ. ಮಾಜಿ ಅಧ್ಯಕ್ಷ ಡಿ.ಜೆ.­ಸುರೇಶ್‌, ಸತ್ಯನಾರಾಯಣ, ದುರ್ಗೇಶ್‌, ಪುಟ್ಟಸ್ವಾಮಿ, ಪದ್ಮಯ್ಯ, ಸುರೇಶ್‌, ದಲಿತ ಸಂಘರ್ಷ ಸಮಿತಿಯ ಅಣ್ಣಯ್ಯ, ಧರ್ಮೇಶ್‌ ಪ್ರತಿಭಟನೆ­ಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry