ಮಂಗಳವಾರ, ಮೇ 17, 2022
24 °C

ಅತಿವೇಗ, ನಿರ್ಲಕ್ಷ್ಯದ ಚಾಲನೆ, ಡಿಕ್ಕಿ: ಚಿತ್ರ ನಟ ರೋನಿತ್ ರಾಯ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿವೇಗ, ನಿರ್ಲಕ್ಷ್ಯದ ಚಾಲನೆ, ಡಿಕ್ಕಿ: ಚಿತ್ರ ನಟ ರೋನಿತ್ ರಾಯ್ ಬಂಧನ

ಮುಂಬೈ (ಪಿಟಿಐ): ಅತಿವೇಗ ಮತ್ತು ನಿರ್ಲಕ್ಷ್ದದ ಚಾಲನೆಗಾಗಿ ಚಲನಚಿತ್ರ ಹಾಗೂ ಟೆಲಿವಿಷನ್ ನಟ ರೋನಿತ್ ರಾಯ್ ಅವರು ಪೊಲೀಸರು ಗುರುವಾರ ಇಲ್ಲಿ ಬಂಧಿಸಿದರು. ಒಂದೇ ಕುಟುಂಬದ ನಾಲ್ವರು ಇದ್ದ ವಾಹನವೊಂದಕ್ಕೆ ತನ್ನ ವಾಹನವನ್ನು ಡಿಕ್ಕಿ ಹೊಡೆಸಿ ಅವರ ಪೈಕಿ ಒಬ್ಬ ಮಹಿಳೆ ತೀವ್ರವಾಗಿ ಗಾಯಗೊಳ್ಳುವಂತೆ ಮಾಡಿದ ಆರೋಪದಲ್ಲಿ ರಾಯ್ ಅವರನ್ನು ಬಂಧಿಸಲಾಯಿತು ಎಂದು ಹೊರವಲಯ ಅಂಬೋಲಿಯ ಪೊಲೀಸರು ತಿಳಿಸಿದ್ದಾರೆ.ರೋನಿತ್ ರಾಯ್ ಅವರನ್ನು ನಂತರ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹಾಜರು ಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟರು  12,000 ರೂಪಾಯಿಗಳ ಭದ್ರತಾ ಠೇವಣಿ ಮೇಲೆ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ. ವಾಹನಗಳ ಸಾಲಿನಲ್ಲಿ ಹಿಂದಿನಿಂದ ಬರುತ್ತಿದ್ದ 42ರ ಹರೆಯದ ಚಿತ್ರ ನಟ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ತಮ್ಮ ವಾಹನವನ್ನು ಚಲಾಯಿಸಿ ನಾಲ್ವರು ಇದ್ದ ವ್ಯಾಗ್ನರ್ ಗೆ ಬೆಳಗ್ಗೆ 6.45ರ ವೇಳೆಗೆ ಸಬ್ ಟಿವಿ ಲೇನ್ ಬಳಿ ಲಿಂಕ್ ರಸ್ತೆಯಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದರು ಎಂದು ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಎಚ್. ವತ್ಕರ್ ಪಿಟಿಐಗೆ ತಿಳಿಸಿದರು.ವ್ಯಾಗ್ನರ್ ನಲ್ಲಿ ಇದ್ದವರನ್ನು ದೀಪಕ್ ದರೇರಾ (60), ಅವರ ಪತ್ನಿ ಕಾಂತಾ (56) ಮತ್ತು ಪುತ್ರಿಯರಾದ ಸ್ನೇಹಾ (29) ಹಾಗೂ ಪೂಜಾ (24) ಎಂದು ಗುರುತಿಸಲಾಗಿದ್ದು ಇವರು ಹೊರವಲಯ ಅಂಧೇರಿ ಶಾಸ್ತ್ರಿನಗರ ಪ್ರದೇಶದವರಾಗಿದ್ದು, ಮಾಥೆರನ್ ಹಿಲ್ ಸ್ಟೇಷನ್ ಕಡೆಗೆ ಪಿಕ್ನಿಕ್ ಹೊರಟಿದ್ದರು ಎಂದು ಪೊಲೀಸರು ಹೇಳಿದರು.ಕಾಂತಾ ಅವರಿಗೆ ಹಿಂಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ಪೂಜಾ ತಲೆಗೆ ಹೊಲಿಗೆ ಹಾಕಲಾಗಿದೆ. ದೀಪಕ್ ಕೈಗೆ ಗಾಯಗಳಾಗಿದ್ದು, ಸ್ನೇಹಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಎಲ್ಲ ಗಾಯಾಳುಗಳನ್ನೂ ಸ್ವತಃ ಚಿತ್ರ ನಟನೇ ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ. ಈ ವಿಚಾರವನ್ನು ಗಾಯಾಳುಗಳೂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.