ಗುರುವಾರ , ಮೇ 19, 2022
24 °C

ಅತಿ ವಿನಯಿ, ಅತಿ ಜಾಣ!

-ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರು Updated:

ಅಕ್ಷರ ಗಾತ್ರ : | |

`ಬಿಗ್ ಬಾಸ್' ಕಾರ್ಯಕ್ರಮ ವಿಜೇತ ವಿಜಯ ರಾಘವೇಂದ್ರ ಅವರು ತಮ್ಮ ವಿಜಯವನ್ನು ಕನ್ನಡ ಜನತೆಗೆ ಸಮರ್ಪಿಸಿದರು. ತನ್ನನ್ನು ಗೆಲ್ಲಿಸಿದ ಕರ್ನಾಟಕದ ಜನರಿಗೆ ತನ್ನ ಗೆಲುವನ್ನು ಸಮರ್ಪಿಸುವುದಾಗಿ ಹೇಳುತ್ತಾ ಶಿರಬಾಗಿ ನಮಸ್ಕರಿಸಿದರಲ್ಲದೆ, `ಬಿಗ್ ಬಾಸ್'ನ ವೇದಿಕೆಯಲ್ಲಿ, ಸಾಷ್ಟಾಂಗ ನಮಸ್ಕಾರವೂ ಸೇರಿದಂತೆ ನಾನಾ ನಮಸ್ಕಾರಗಳನ್ನು ಮಾಡಿದರು.ಅನಂತರ ಕಿರುತೆರೆಯ ಸಂದರ್ಶನವೊಂದರಲ್ಲಿ, ಉತ್ತರಾಖಂಡದ ಸಂತ್ರಸ್ತರನ್ನೂ ಅವರು ನೆನೆದರು. ಎಂಥ ಒಳ್ಳೆಯ ಹೃದಯ! ಎಂಥ ವಿನಯ!ಆದರೆ, ಅದೇ ಸಂದರ್ಶನದಲ್ಲಿ ನಿರೂಪಕರು, `ನಿಮ್ಮನ್ನು ಗೆಲ್ಲಿಸಿದ ಕರ್ನಾಟಕದ ಜನತೆಗೆ ನೀವು ತಿರುಗಿ ಏನನ್ನು ಕೊಡುತ್ತೀರಿ? ಪ್ರಶಸ್ತಿಯ 50 ಲಕ್ಷ ರೂಪಾಯಿಗಳಲ್ಲಿ ಎಷ್ಟು ಹಣ ಅವರಿಗಾಗಿ ವಿನಿಯೋಗಿಸುತ್ತೀರಿ? ಉತ್ತರಾಖಂಡದ ಸಂತ್ರಸ್ತರಿಗೆ ಎಷ್ಟು ನೆರವು ನೀಡುತ್ತೀರಿ?' ಎಂದು ಅವರನ್ನು ಪ್ರಶ್ನಿಸಿದಾಗ ಮಾತ್ರ, ಯಾವ ನಿರ್ದಿಷ್ಟ ಉತ್ತರವನ್ನೂ ನೀಡದೆ ಹಾರಿಕೆಯ ಉತ್ತರ ನೀಡಿ ಜಾರಿಕೊಂಡರು! ಅವರ ಒಳ್ಳೆಯತನದ ಆಳ ಎಷ್ಟೆಂಬುದು ಪ್ರಜ್ಞಾವಂತ ಕನ್ನಡಿಗರಿಗೆ ಗೊತ್ತಾಯಿತು. ಅವರ ಜಾಣತನದ ಅರಿವೂ ಕನ್ನಡಿಗರಿಗೆ ಉಂಟಾಯಿತೆನ್ನಿ. `ಅತಿ ವಿನಯಂ ಜಾಣ ಲಕ್ಷಣಂ'!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.