ಅತ್ತಿಬೆಲೆ: ಗಣೇಶ ಮೂರ್ತಿವಿಸರ್ಜನೆ ವೇಳೆ ಬಾಲಕ ಸಾವು

7

ಅತ್ತಿಬೆಲೆ: ಗಣೇಶ ಮೂರ್ತಿವಿಸರ್ಜನೆ ವೇಳೆ ಬಾಲಕ ಸಾವು

Published:
Updated:

ಹೊಸಕೋಟೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ದಿನೇಶ್‌ (17) ಎಂಬ ಬಾಲಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ಭಾನುವಾರ ನಡೆದಿದೆ.ಸೂಲಿಬೆಲೆಯ ವಿವೇಕಾನಂದ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ದಿನೇಶ್‌, ಸ್ನೇಹಿತರ ಜೊತೆ ಗ್ರಾಮದಲ್ಲಿನ ಗಣೇಶ ಮೂರ್ತಿ ವಿಸರ್ಜನೆಗೆ ತೆರೆಳಿದ್ದ. ಗ್ರಾಮಕ್ಕೆ ಹೊಂದಿಕೊಂಡಿರುವ ಸೂಲಿಬೆಲೆ ಕೆರೆಯಲ್ಲಿ ಇಟ್ಟಿಗೆ ಗೂಡಿನ  ಮಣ್ಣಿಗಾಗಿ ದೊಡ್ಡಗಾತ್ರದ ಹಳ್ಳಗಳನ್ನು ತೋಡ ಲಾಗಿದೆ.ಇತ್ತೀಚಿನ ಮಳೆಯಿಂದಾಗಿ ಅವು ತುಂಬಿಕೊಂಡಿದ್ದು, ಹಳ್ಳಗಳಿರು ವುದು ಗೊತ್ತಾಗುತ್ತಿರಲಿಲ್ಲ. ಹೀಗಾಗಿ ದಿನೇಶ್‌, ಹಳ್ಳವೊಂದರಲ್ಲಿ ಕಾಲಿಟ್ಟು ಮುಳುಗಿದ್ದಾನೆ. ಸೂಲಿಬೆಲೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry