ಅತ್ಯಾಚಾರಕ್ಕೆ ಯತ್ನ: ಪ್ರತಿಭಟನೆ

ಶನಿವಾರ, ಮೇ 25, 2019
27 °C

ಅತ್ಯಾಚಾರಕ್ಕೆ ಯತ್ನ: ಪ್ರತಿಭಟನೆ

Published:
Updated:

ಗಜೇಂದ್ರಗಡ: ಗ್ರಾ.ಪಂ. ಸದಸ್ಯರೊಬ್ಬರು ಪಾನಮತ್ತರಾಗಿ ತಡರಾತ್ರಿ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಲಕ್ಕಲಕಟ್ಟಿ ಗಾ.ಪಂ ಗೆ ಮುತ್ತಿಗೆ ಹಾಕಿ, ಗ್ರಾ.ಪಂ ಸದಸ್ಯನ ಪ್ರತಿಕೃತಿ ದಹಿಸಿದ ಘಟನೆ     ಶುಕ್ರವಾರ ನಡೆದಿದೆ.`ಲಕ್ಕಲಕಟ್ಟಿ ಗ್ರಾಮದ ಗ್ರಾ.ಪಂ ಸದಸ್ಯ ಠಾಕಪ್ಪ ರಾಠೋಡ್ ಎಂಬುವವರು ಗುರುವಾರ ತಡರಾತ್ರಿ ಪಾನಮತ್ತರಾಗಿ, ಅರೆನಗ್ನ ಸ್ಥಿತಿಯಲ್ಲಿ ಗ್ರಾಮದ ಇಬ್ಬರು ಮಹಿಳೆಯರ ನಿವಾಸಕ್ಕೆ ತೆರಳಿ, ಬಾಗಿಲನ್ನು ಬಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭ   ಮಹಿಳೆಯರು ನಡೆಸಿದ ಚೀರಾಟ, ಹಾರಾಟದಿಂದ ಗ್ರಾಮಸ್ಥರು   ಎಚ್ಚರಗೊಂಡು ಮಹಿಳೆಯರ ನಿವಾಸಗಳತ್ತ    ದೌಡಾಯಿಸಿದ್ದಾರೆ. ಜನರನ್ನು ಕಂಡ ಗ್ರಾ.ಪಂ ಸದಸ್ಯ ರಾತ್ರೋರಾತ್ರಿ ಗ್ರಾಮ ತೊರೆದಿದ್ದಾನೆ~ ಎಂದು ಪ್ರತಿಭಟನಾಕಾರರು   ಹೇಳಿದರು.ಗ್ರಾಮದ ಒಂಟಿ ಮಹಿಳೆಯರು ವಾಸಿಸುವ ಮನೆಗಳನ್ನು ಆಯ್ಕೆ ಮಾಡಿಕೊಳ್ಳುವ ಠಾಕಪ್ಪ ಪಾನಮತ್ತನಾಗಿ

ತಡರಾತ್ರಿ ಮಹಿಳೆಯರ ಮನೆಯ ಬಾಗಿಲುಗಳನ್ನು ತಟ್ಟುತ್ತಾನೆ. ಬಾಗಿಲನ್ನು ತೆರೆಯುವ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಾನೆ. ಇಂತಹ ಕೃತ್ಯವನ್ನು ಹಲವು ವರ್ಷಗಳಿಂದ ಆತ ನಡೆಸುತ್ತ ಬಂದಿದ್ದು, ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಠಾಕಪ್ಪನ ವರ್ತನೆಯ ವಿರುದ್ದ ಯಾರಾದರೂ ಧ್ವನಿ ಎತ್ತಿದಲ್ಲಿ ಅವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಭೀತಿ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಆತನ ಗ್ರಾ.ಪಂ. ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಫಲ ನೀಡದ ಕಾರ್ಯದರ್ಶಿ ಮನವಿ: ~ಠಾಕಪ್ಪ ಅವರು ನಡೆಸಿದೆ ಎನ್ನಲಾದ ಅನುಚಿತ ವರ್ತನೆ ವೈಯಕ್ತಿಕವಾದದ್ದು. ಆದ್ದರಿಂದ ನೀವು ಅವರ ಮನೆ ಎದುರು ಧರಣಿ ನಡೆಸಿ~ ಎಂದು ಗ್ರಾ.ಪಂ ಕಾರ್ಯದರ್ಶಿ ಬಿ.ಎಂ. ತುಗಲ್‌ದೋಣಿ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು ಮಾತ್ರ ಮನವಿಗೆ ಸ್ಪಂದಿಸಲಿಲ್ಲ.ಹನುಮಂತ ಕೊಪ್ಪದ, ಬಸವರಾಜ ದಾನೊಟಗಿ, ಪರಶುರಾಮ ಕೊಪ್ಪದ, ಸುರಕ್ಷಿತ ಧರಿಯಣ್ಣನವರ, ಶರಣಪ್ಪ ಹಳ್ಳದ, ಶರಣಪ್ಪ ಹೊಸಳ್ಳಿ, ಚಂದಪ್ಪ ಬೆನಕನವಾರಿ, ಮುತ್ತಪ್ಪ ಕೊತಬಾಳ, ಕುಮಾರ ಕೊಪ್ಪದ, ಶರಣಪ್ಪ ಕಡಬಲಕಟ್ಟಿ, ಗುರುಮೂರ್ತಿ ಜಿಗಳೂರ, ಗಂಗಪ್ಪ ಭಗವತಿ, ಬಸವರಾಜ ಕುರಿ, ರಮೇಶ ಭಗವತಿ ಹಾಗೂ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry