ಅತ್ಯಾಚಾರಕ್ಕೊಳಗಾದ ಯುವತಿಯ ಗ್ರಾಮಕ್ಕೆ ರಾಹುಲ್ ಭೇಟಿ

7

ಅತ್ಯಾಚಾರಕ್ಕೊಳಗಾದ ಯುವತಿಯ ಗ್ರಾಮಕ್ಕೆ ರಾಹುಲ್ ಭೇಟಿ

Published:
Updated:

ಬಾಂದ (ಉತ್ತರಪ್ರದೇಶ) (ಪಿಟಿಐ): ಬಿಎಸ್ಪಿ ಶಾಸಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿಯನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸೋಮವಾರ ಆಕೆಯ ಗ್ರಾಮದಲ್ಲಿ ಭೇಟಿ ಮಾಡಿದರು.ಶಾಸಕರ ಬೆಂಬಲಿಗರು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಯುವತಿ ಹೇಳಿದ್ದಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವುದಾಗಿ ರಾಹುಲ್ ಭರವಸೆ ಇತ್ತರು.

‘ರಾಹುಲ್ ಅವರು ಮಧ್ಯಾಹ್ನ ಮನೆಗೆ ಬಂದರು. ನಾವು ನೀಡಿದ ಹಾಲನ್ನು ಸೇವಿಸಿದರು’ ಎಂದು ಹಿಂದುಳಿದ ಸಮುದಾಯಕ್ಕೆ ಸೇರಿದ 17 ವರ್ಷದ ಯುವತಿ ಸುದ್ದಿಗಾರರಿಗೆ ಶಾಹ್‌ಬಾಜ್‌ಪುರ್ ಗ್ರಾಮದಲ್ಲಿ ತಿಳಿಸಿದಳು.

 

ರಾಹುಲ್ ಅವರು ಈ ಯುವತಿಯೊಂದಿಗೆ ಸುಮಾರು 30 ನಿಮಿಷಗಳವರೆಗೆ ಮಾತುಕತೆ ನಡೆಸಿದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry