ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಯುವತಿ ತಂದೆ ಹೇಳಿಕೆ

7

ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಯುವತಿ ತಂದೆ ಹೇಳಿಕೆ

Published:
Updated:

ನವದೆಹಲಿ (ಐಎಎನ್‌ಎಸ್‌): ‘ಅಪರಾಧಿಗಳಿಗೆ ಜೀವಿಸುವ ಹಕ್ಕಿಲ್ಲ. ಅವರನ್ನು ನೇಣಿಗೆ ಹಾಕಬೇಕು’ ಎಂದು ಸಾಮೂಹಿಕ ಅತ್ಯಾಚಾರ­ದಿಂದ ಸಾವನ್ನಪ್ಪಿದ ಯುವತಿ ತಂದೆ ಬುಧವಾರ ಹೇಳಿದರು.‘ಅವರೆಲ್ಲರೂ (ಅಪರಾಧಿಗಳು) ನನ್ನ ಮಗಳನ್ನು ಕೊಂದಿ­ದ್ದಾರೆ ಅವರನ್ನು ಬದುಕಲು ಬಿಡಬೇಡಿ. ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ. ಇಂತಹ ತೀರ್ಪಿನ ಮೂಲಕ ಅತ್ಯಾಚಾರ ಎಸಗುವವರಿಗೆ ಕಠಿಣ ಎಚ್ಚರಿಕೆಯನ್ನೂ ನೀಡ­ಬೇಕು’ ಎಂದು ಕೋರ್ಟ್‌ ಆವರಣದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.ಅಪರಾಧಿಗಳು ದಯೆ ತೋರುವಂತೆ ಮನವಿ ಮಾಡಿ­ಕೊಂಡಿ­ರುವ ಪ್ರಶ್ನೆಗೆ ಉತ್ತರಿಸಿದ ಯುವತಿಯ ತಾಯಿ, ‘ನಾವು ಕೂಡ ನ್ಯಾಯದ ಭಿಕ್ಷೆಗಾಗಿ ಅಂಗಲಾಚಿದ್ದೇವೆ. ನ್ಯಾಯಾಲಯವು ಅಪರಾಧಿಗಳ ಭಾವನಾತ್ಮಕ ಮನವಿಯನ್ನು ಪುರಸ್ಕೃರಿಸುವುದಿಲ್ಲ ಎಂಬ ನಂಬಿಕೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry