ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲಿ

7

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲಿ

Published:
Updated:

ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ವಿಚಾರ ತಿಳಿದು  ಆಘಾತವಾಯಿತು. ಇದು ನಾಗರಿಕ ಸಮಾಜವೇ ಎಂದೆನಿಸಿ ದಿಗ್ಭ್ರಾಂತಳಾದೆ. ಇತ್ತೀಚೆಗೆ ಈ ರೀತಿ ಗುಂಪು ಅತ್ಯಾಚಾರಗಳು ಶಿಶುವಿನಿಂದ ಹಿಡಿದು ವೃದ್ಧರವರೆಗೂ ನಡೆಯುತ್ತಲೆ ಇದೆ. ಆದರೆ  ನಿದರ್ಶನ ರೂಪದ ಶಿಕ್ಷೆ ಆಗುತ್ತಿಲ್ಲವೇಕೆ?ಇನ್ನೊಂದೆಡೆ ಅಶ್ಲೀಲ ಸಿನಿಮಾ ಚಿತ್ರಗಳು, ಜಾಹೀರಾತುಗಳು ಮಹಿಳೆಯರನ್ನು ಕೀಳಾಗಿ ಪ್ರದರ್ಶಿಸುತ್ತಿವೆ. ಹೀಗಾಗಿ ಮಹಿಳೆಯರೆಂದರೆ ಭೋಗಲಾಲಸೆ ವಸ್ತುಗಳೆಂದು ಪರಿಗಣಿಸಲಾಗುತ್ತಿದೆ. ಮಹಿಳೆಯರನ್ನು ಕಂಡರೆ ಪ್ರಾಣಿಗಳಂತೆ ಬೇಟೆಯಾಡಿ ಹೀನಕೃತ್ಯವೆಸಗುತ್ತಿರುವುದು, ವಿಚಿತ್ರ ಸಂತೋಷ ಪಡೆಯುತ್ತಿರುವುದನ್ನು ನೋಡಿದರೆ ವಿಷಾದವೆನಿಸುತ್ತದೆ. ಹೆಣ್ಣುಮಕ್ಕಳ ಮೇಲಾಗುವ ಇಂಥ ಯಾವುದೇ ದುಷ್ಕೃತ್ಯಕ್ಕೆ ಕಠಿಣ ಶಿಕ್ಷೆ ಕೊಡಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry