ಅತ್ಯಾಚಾರಿಗಳಿಗೆ ಗಲ್ಲು: ಸಾರ್ವಜನಿಕರ ಪ್ರತಿಕ್ರಿಯೆ

7

ಅತ್ಯಾಚಾರಿಗಳಿಗೆ ಗಲ್ಲು: ಸಾರ್ವಜನಿಕರ ಪ್ರತಿಕ್ರಿಯೆ

Published:
Updated:

ಈಗ ಸಮಯ ಬಂದಿದೆ

ದೆಹಲಿಯ ಸಾಮೂಹಿಕ ಅತ್ಯಾಚಾರದ ಅಪರಾಧಿಗಳಿಗೆ ತಡವಾಗಿಯಾದರೂ ಗಲ್ಲು ಶಿಕ್ಷೆ ನೀಡಿರುವುದು ಸಮಾಧಾನ ತಂದಿದೆ. ಈ ಅಪರಾಧಕ್ಕೆ ಗಲ್ಲು ಸೂಕ್ತ ಶಿಕ್ಷೆ. ಇಂತಹ ವಿಕೃತ ಮನಸ್ಸುಗಳು ಎಲ್ಲೆಡೆ ಇವೆ.  ಅವುಗಳನ್ನು ಕಾನೂನಿಂದ ಕಟ್ಟಿ ಹಾಕಲು ಸಾಧ್ಯವಿಲ್ಲ.   ಭಾರತೀಯ ಕಾನೂನು ಬಲಪಡಿಸುವ ಜತೆ ಪರ್ಯಾಯ ಹಾದಿ ಹುಡುಕಲು ಈಗ ಸಮಯ ಬಂದಿದೆ.

- ಎನ್.ಎಂ.ಸುಮಂತ್,  ಉಪನ್ಯಾಸಕಸ್ತ್ರೀಸಂಕುಲಕ್ಕೆ ನ್ಯಾಯ

‘ಅತ್ಯಾಚಾರಿಗಳಿಗೆ ಗಲ್ಲು ವಿಧಿಸಿರುವುದು ಸ್ತ್ರೀ ಸಂಕುಲಕ್ಕೆ ಸಂದ ನ್ಯಾಯವೆಂದೇ ಭಾವಿಸುತ್ತೇನೆ. ಅತ್ಯಾಚಾರವೆಸಗಿ ಸಾಬೀತಾದವರಿಗೆ ಗಲ್ಲು ಶಿಕ್ಷೆ ಬಿಟ್ಟು ಬೇರೆ ಯಾವ ಶಿಕ್ಷೆ ನೀಡುವುದು ಸೂಕ್ತವಲ್ಲ. ಇಂತಹ ಪ್ರಕರಣಗಳು ಮರುಕಳಿಸಿದಂತೆ ಜಾಗ್ರತೆ ವಹಿಸುವುದು  ಪ್ರತಿಯೊಬ್ಬರ ಕರ್ತವ್ಯ’

-ಶ್ರುತಿ ಚಂದ್ರಶೇಖರ್, ವಿದ್ಯಾರ್ಥಿನಿ, ವಾಸವಿ ವಿದ್ಯಾನಿಕೇತನ ಕಾಲೇಜುಭಯ ಹುಟ್ಟುತ್ತದೆ

‘ಗಲ್ಲು ಶಿಕ್ಷೆ ವಿಧಿಸುವುದರಿಂದ ಸಮಾಜ ವಿರೋಧ ಕೃತ್ಯಗಳಲ್ಲಿ ತೊಡಗುವವರಿಗೆ ಭಯ ಹುಟ್ಟುವುದು ನಿಜ. ಈ  ಪ್ರಕರಣಕ್ಕೆ ಗಲ್ಲು ವಿಧಿಸಿರುವುದು ಸೂಕ್ತವಾಗಿದೆ. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಹಾಗೂ ಅಪರಾಧಿಗಳ ಸಾಮಾಜಿಕ ಹಿನ್ನೆಲೆ ಮತ್ತು ಅದಕ್ಕೆ ಕಾರಣ   ಬಗ್ಗೆಯೂ ಸೂಕ್ತ ಚರ್ಚೆ ನಡೆಯಬೇಕಿದೆ’

- ಹೇಮಂತ್ ಕುಮಾರ್, ಐಟಿ ಉದ್ಯೋಗಿಗಲ್ಲು ಶಿಕ್ಷೆ ಏಕೆ?

‘ಒಂದು ಪ್ರಕರಣಕ್ಕೆ ಗಲ್ಲು ಶಿಕ್ಷೆ ವಿಧಿಸಿದ ಮಾತ್ರಕ್ಕೆ ಅತ್ಯಾಚಾರ ನಿಲ್ಲುವುದಿಲ್ಲ. ಈ ಒಂದು ಪ್ರಕರಣಕ್ಕೆ ಮಾತ್ರ ಯಾಕೆ ಗಲ್ಲು   ಶಿಕ್ಷೆ ವಿಧಿಸಲಾಗಿದೆ? ದೆಹಲಿ ಅಲ್ಲದೇ ದೇಶದಾದ್ಯಂತ ಈ ರೀತಿ ನೂರಾರು ಪ್ರಕರಣಗಳು ನಡೆದಿವೆ. ಹಲವು ಹೆಣ್ಣುಮಕ್ಕಳು ಪ್ರಾಣ ತೆತ್ತಿದ್ದಾರೆ.

ಅಪರಾಧಿಗಳು ಪ್ರಭಾವಿ ವ್ಯಕ್ತಿಗಳಲ್ಲ. ಹಾಗಾಗಿ ಗಲ್ಲು ಶಿಕ್ಷೆಯಾಗಿದೆ. ಈ ತೀರ್ಪಿನ ಹಿಂದೆ ರಾಜಕೀಯದ  ನೆರಳು ಗೋಚರಿಸುತ್ತಿದೆ’

- ಹೇಮಾ ಪವಾರ್, ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ, ವಿಪ್ರೊನರಳಿಸಿ ಸಾಯಿಸಿ

‘ಗಲ್ಲು ಶಿಕ್ಷೆ ನೀಡಿದ್ದು ಒಳ್ಳೆಯದೇ ಆಯ್ತು. ಸಾಧ್ಯವಾದರೆ ಸಂತ್ರಸ್ತೆ ನರಳಿ ನರಳಿ ಸತ್ತ ಹಾಗೇ ಅಪರಾಧಿಗಳನ್ನು ನರಳಿಸಿ ಸಾಯಿಸಬೇಕು. ಆ ಮೂಲಕ ವಿಕೃತ ಕಾಮಿಗಳಿಗೆ, ಅತ್ಯಾಚಾರಿಗಳಿಗೆ  ಸ್ಪಷ್ಟ ಸಂದೇಶ ರವಾನಿಸಬೇಕು’

–ಶ್ರೇಯಾ ಶೆಟ್ಟಿ, ವಿದ್ಯಾರ್ಥಿನಿ, ವೋಗ್ ಯೂನಿರ್ವಸಿಟಿಗೌರವವಿರಲಿ

‘ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ­ಯಾಗಿ­ರುವ ಬಗ್ಗೆ ಸಂಭ್ರಮಿಸುವ ಜತೆ­ಯಲ್ಲಿಯೇ ಅತ್ಯಾಚಾರಕ್ಕೆ ಒಳಗಾದ ಹೆಣ್ಣಮಕ್ಕಳನ್ನು ಗೌರವಿಸುತ್ತೇವೆ ಎಂದು ಶಪಥ ಮಾಡೋಣ’

- ಗುರುಪ್ರಕಾಶ್  ಬಿ.ಎಂ, ಗ್ರಾಫಿಕ್ ಕಲಾವಿದತಕ್ಕ ಶಿಕ್ಷೆ

ದೆಹಲಿಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಅಪರಾಧಿಗಳಿಗೆ ತಕ್ಕ ಶಾಸ್ತಿಯಾಗಿದೆ. ಇದು ಅತ್ಯಾಚಾರ ಮಾಡುವವರಿಗೆ ಭಯ ಹುಟ್ಟಿಸು­ವಂತಹುದಾಗಿದೆ. ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಬರ್ಬರವಾಗಿತ್ತು. ಆ ಕೃತ್ಯ ಎಸಗಿದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಿದೆ.

- ಕಿಶೋರ್‌ ಕುಮಾರ್‌ ವಿ. ವಿದ್ಯಾರ್ಥಿ.ಪಾಠ ಕಲಿಯಬೇಕು

ಈ ಪ್ರಕರಣ ಇಡೀ ದೇಶವನ್ನೇ ಬಡಿದೆಬ್ಬಿಸಿತ್ತು. ಮಹಿಳೆಯರನ್ನು ದೇವತೆ­ಯೆಂದು ಪೂಜಿಸುವ ದೇಶದಲ್ಲಿ ಮಹಿಳೆ­ಯರ ಮೇಲಿನ ಈ ದೌರ್ಜನ್ಯ­ವನ್ನು ಸಹಿಸಲು ಅಸಾಧ್ಯವಾಗಿತ್ತು.  ಈ ಶಿಕ್ಷೆಯಿಂದ ಅತ್ಯಾಚಾರಿಗಳು ಪಾಠ ಕಲಿಯಬೇಕು’

- ಆನಂದ ಗುಡಿಗೇರಿ, ವಿದ್ಯಾರ್ಥಿ.ಕೂಡಲೇ ಜಾರಿಗೊಳಿಸಿ

ಅಪರಾಧಿ­ಗಳಿಗೆ ಮರಣ­ದಂಡನೆಯೆ ಸರಿಯಾದ ಶಿಕ್ಷೆ. ಈಗ ತ್ವರಿತ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ. ಮುಂದೆ ಹೈಕೋರ್ಟ್‌ ಸುಪ್ರೀಂಕೋರ್ಟ್‌ ನಂತರ ರಾಷ್ಟ್ರಪತಿ ಹೀಗೆ ಶಿಕ್ಷೆ ಮುಂದುವರಿಸುತ್ತ ಹೋದರೆ, ಖಂಡಿತ ಅಪರಾಧಿಗಳಿಗೆ ಶಿಕ್ಷೆ ದೊರೆಯುವುದಿಲ್ಲ. ಈ ಕೂಡಲೇ ಶಿಕ್ಷೆ ಜಾರಿಗೊಳಿಸಬೇಕು.

- ಲಕ್ಷ್ಮಿನಾರಾಯಣ, ಆಪ್ತ ಸಮಾಲೋಚಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry