ಅತ್ಯಾಚಾರಿಗಳ ವಿರುದ್ಧ ರಾಲಿ

7

ಅತ್ಯಾಚಾರಿಗಳ ವಿರುದ್ಧ ರಾಲಿ

Published:
Updated:

ಹುಬ್ಬಳ್ಳಿ: ಅತ್ಯಾಚಾರಿಗಳನ್ನು ಗಲ್ಲಿಗೇರಿ ಸಬೇಕು, ಮಹಿಳೆ ಪೂಜ್ಯಳು, ಅವಳಿಗೆ ರಕ್ಷಣೆ ಹಾಗೂ ಗೌರವ ನೀಡಬೇಕು ಎಂದು ಭಿತ್ತಿಪತ್ರ ಹೊತ್ತ ನಗರದ ಪಿ.ಸಿ. ಜಾಬಿನ್ ಕಾಲೇಜಿನ ವಿದ್ಯಾರ್ಥಿನಿ ಯರು ಶುಕ್ರವಾರ ರಾಲಿ ನಡೆಸಿದರು.ನವದೆಹಲಿಯಲ್ಲಿ ಯುವತಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರವನ್ನು ವಿರೋಧಿಸಿ ಅವರು ರಾಲಿ ಹಮ್ಮಿ ಕೊಂಡಿದ್ದರು. ರಾಲಿ ನಂತರ ವಿದ್ಯಾರ್ಥಿ ಪ್ರತಿನಿಧಿಗಳಾದ ಪುಷ್ಪಲತಾ, ಕವಿತಾ, ಸುಷ್ಮಾ, ದಿವ್ಯಾ, ವಿವೇಕ, ಶಾಲಿನಿ, ರಜನಿ, ಪ್ರಶಾಂತ, ಅಜಿತ್ ಮಾತನಾಡಿ ದರು. ಕಾಲೇಜಿನ ಪ್ರಾಚಾರ್ಯ ವಿ.ಬಿ. ಹಿರೇಮಠ ಹಾಜರಿದ್ದರು.ದೊಂದಿ ಹಿಡಿದು ಪ್ರತಿಭಟನೆ: ನವದೆಹಲಿಯಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಇಲ್ಲಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠ ದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ರಾತ್ರಿ ದೊಂದಿ ಹಿಡಿದು ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry