ಅತ್ಯಾಚಾರಿಗಳ ಹಾಜರಾತಿಗೆ ಸೂಚನೆ

7

ಅತ್ಯಾಚಾರಿಗಳ ಹಾಜರಾತಿಗೆ ಸೂಚನೆ

Published:
Updated:

ನವದೆಹಲಿ(ಪಿಟಿಐ): ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾದ ನಾಲ್ವರು ಅಪರಾಧಿಗಳನ್ನು ಮಂಗಳವಾರ ತನ್ನ ಎದುರು ಹಾಜರು ಪಡಿಸುವಂತೆ ದೆಹಲಿ ಹೈಕೋರ್ಟ್‌ ಸೋಮವಾರ ವಾರಂಟ್‌ ಜಾರಿ ಮಾಡಿದೆ.

ಗಲ್ಲು ಶಿಕ್ಷೆಗೆ ಒಳಗಾದ ಮುಖೇಶ್ (26), ಅಕ್ಷಯ್ ಠಾಕೂರ್ (28), ಪವನ್ ಗುಪ್ತ (19) ಮತ್ತು ವಿನಯ್ ಶರ್ಮಾನನ್ನು ಹಾಜರುಪಡಿಸುವಂತೆ ಆದೇಶ ನೀಡಿದೆ.

ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಮೇಲ್ಮನವಿ ಸಲ್ಲಿಸುವುದನ್ನು  ಖಚಿತಪಡಿಸಿಕೊಳ್ಳಲು  ಸರ್ಕಾರಿ ವಕೀಲ ದಯನ್ ಕೃಷ್ಣನ್‌  ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ  ಹೈಕೋರ್ಟ್‌ ಈ ಆದೇಶ ನೀಡಿದೆ.

ದೆಹಲಿ ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 13ರಂದು  ಈ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry