ಅತ್ಯಾಚಾರ: ಆರೋಪಪಟ್ಟಿ ಸಲ್ಲಿಕೆ

7

ಅತ್ಯಾಚಾರ: ಆರೋಪಪಟ್ಟಿ ಸಲ್ಲಿಕೆ

Published:
Updated:

ಮುಂಬೈ (ಪಿಟಿಐ): ಪತ್ರಿಕಾ ಛಾಯಾ­ಗ್ರಾಹಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋ­ಪಿಗಳ ವಿರುದ್ಧ ಪೊಲೀ­ಸರು ಗುರುವಾರ ಆರೋಪಪಟ್ಟಿ ಸಲ್ಲಿಸಿ­ದ್ದಾರೆ.ಸಲೀಂ ಅನ್ಸಾರಿ, ವಿಜಯ್ ಜಾಧವ್, ಮೊಹಮ್ಮದ್ ಖಾಸಿಂ, ಹಫೀಜ್ ಶೇಕ್ ಅಲಿಯಾಸ್ ಖಾಸಿಂ ಬೆಂಗಾಲಿ, ಸಿರಾಜ್ ರೆಹಮಾನ್ ಖಾನ್ ಹಾಗೂ ಬಾಲಕನೊಬ್ಬ ಪ್ರಕರ­ಣದ ಆರೋಪಿಗಳಾಗಿದ್ದಾರೆ.ಈ ಪೈಕಿ ನಾಲ್ವರ ವಿರುದ್ಧ ಮ್ಯಾಜಿ­ಸ್ಟ್ರೇಟ್ ಕೋರ್ಟ್‌ನಲ್ಲಿ, ಮತ್ತೊಬ್ಬ ಬಾಲಾರೋಪಿ ವಿರುದ್ಧ ಇಲ್ಲಿನ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ  ಆರೋಪಪಟ್ಟಿ ಸಲ್ಲಿಸ­ಲಾಗಿದೆ.ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 376 ಡಿ (ಸಾಮೂಹಿಕ ಅತ್ಯಾಚಾರ), 377 (ಅಸಹಜ ಲೈಂಗಿಕ ಕ್ರಿಯೆ), 201 (ಸಾಕ್ಷ್ಯ ನಾಶ), 120 ಬಿ (ಅಪರಾಧ ಸಂಚು) ಹಾಗೂ 34 (ಸಾಮಾನ್ಯ ಉದ್ದೇಶ) ಸೇರಿದಂತೆ ವಿವಿಧ ದಂಡ ಸಂಹಿ­ತೆಗಳಡಿ ಆರೋಪಪಟ್ಟಿ  ಸಲ್ಲಿಸಲಾಗಿದೆ.ಒಟ್ಟು 600 ಪುಟಗಳ ಆರೋಪ­ಪಟ್ಟಿಯು, 86 ಪುರಾವೆಗಳು, ಘಟನಾ ಸ್ಥಳದಲ್ಲಿ ಸಂಗ್ರಹಿಸಲಾದ ವಿಧಿ ವಿಜ್ಞಾ­ನದ ಪುರಾವೆ, ಡಿಎನ್‌ಎ ವಿಶ್ಲೇಷಣಾ ವರದಿಗಳು ಹಾಗೂ ಫೋನ್ ಕರೆಗಳ ದಾಖಲೆಗಳನ್ನು ಒಳಗೊಂಡಿದೆ.ಸಹೋದ್ಯೋಗಿಯೊಂದಿಗೆ ಚಿತ್ರ ತೆಗೆಯುವುದಕ್ಕಾಗಿ ಶಕ್ತಿ ಮಿಲ್ ಆವರಣಕ್ಕೆ ಭೇಟಿ ನೀಡಿದ್ದ ಛಾಯಾ­ಗ್ರಾಹಕಿ ಮೇಲೆ,  ಆಗಸ್ಟ್ 22ರಂದು ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry