ಟೆಲ್ ಅವೀವ್ (ಡಿಪಿಎ): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ನ ನ್ಯಾಯಾಲಯವೊಂದು ದೇಶದ ಮಾಜಿ ಅಧ್ಯಕ್ಷ ಮೋಶೆ ಕತ್ಸಾವ್ ಅವರನ್ನು ದೋಷಿ ಎಂದು ಘೋಷಿಸಿದೆ. ಈ ಮೂಲಕ ಕೌಟುಂಬಿಕ ಜೀವನಕ್ಕೆ ಭಾರಿ ಮಹತ್ವ ನೀಡುವ ದೇಶದಲ್ಲಿ ಹೊಸ ಸಂಚಲನ ಉಂಟಾಗಿದೆ.
ಕತ್ಸಾವ್ (65) ಅವರು 2000ದಿಂದ 2007ರ ತನಕ ಅಧ್ಯಕ್ಷರಾಗಿದ್ದರು. 1998ರಲ್ಲಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಅವರ ಸಹೋದ್ಯೋಗಿಗಳು 2006ರಲ್ಲಿ ದೂರು ನೀಡಿದ್ದರು. ನಾಲ್ಕು ವರ್ಷಗಳ ವಿಚಾರಣೆ ಬಳಿಕ ಲೈಂಗಿಕತೆಗೆ ಸಂಬಂಧಿಸಿದ ಎಲ್ಲಾ ಆರೋಪಗಳಲ್ಲಿ ಅಂದರೆ ಎರಡು ಅತ್ಯಾಚಾರ ಪ್ರಕರಣಗಳು ಮತ್ತು ಒಂದು ಅಸಭ್ಯ ವರ್ತನೆ ಪ್ರಕರಣಗಳಲ್ಲಿ ದೋಷಿ ಎಂಬ ತೀರ್ಪು ನೀಡಲಾಗಿದೆ. ಟೆಲ್ ಅವೀವ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಾರ್ಜ್ ಕಾರಾ ಅವರು ಈ ತೀರ್ಪು ನೀಡಿದ್ದಾರೆ.
ಕತ್ಸಾವ್ ಅವರು ವಿವಾಹಿತರಾಗಿದ್ದು, ಐವರು ಮಕ್ಕಳು ಮತ್ತು ಇಬ್ಬರು ಮೊಮ್ಮಕ್ಕಳು ಇದ್ದಾರೆ. ಇಸ್ರೇಲ್‌ನ ಅತ್ಯುನ್ನತ ಸ್ಥಾನ ಅಲಂಕರಿಸಿದ ವ್ಯಕ್ತಿ ಕಟಕಟೆ ಏರಿದ ಪ್ರಸಂಗ ಇದೇ ಮೊದಲನೆಯದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.