`ಅತ್ಯಾಚಾರ: ಕಠಿಣ ಕಾನೂನು ಅಗತ್ಯ'

7

`ಅತ್ಯಾಚಾರ: ಕಠಿಣ ಕಾನೂನು ಅಗತ್ಯ'

Published:
Updated:

ನವದೆಹಲಿ (ಪಿಟಿಐ): ಅತ್ಯಾಚಾರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕೇವಲ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದರೆ ಸಾಲದು. ಬದಲಾಗಿ ತೀವ್ರ ಪರಿಣಾಮಕಾರಿ ಕಾನೂನು ತಿದ್ದುಪಡಿಯ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ತ್ವರಿತ ನ್ಯಾಯಾಲಯಗಳ ಸ್ಥಾಪನೆಯಿಂದ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ತ್ವರಿತ ನ್ಯಾಯಾಲಯಗಳಿದ್ದರೂ, ಪ್ರಕರಣಗಳು ಬೇಗ ಇತ್ಯರ್ಥವಾಗುತ್ತಿದ್ದರೂ, ಸಹ ಅದರ ಭೀತಿಯಿಲ್ಲದೆ ದೇಶದಲ್ಲಿ ಪದೇ ಪದೇ ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿರುವುದು ವ್ಯಾಕುಲವನ್ನು ಉಂಟು ಮಾಡುತ್ತಿದೆ ಎಂದು ನ್ಯಾಯಾಧೀಶರಾದ ಗ್ಯಾನ್ ಸುಧಾ ಮಿಶ್ರಾ ನೇತೃತ್ವದ ಪೀಠ ಹೇಳಿದೆ.ತೀವ್ರ ಪರಿಣಾಮಕಾರಿಯಾದ ಕಾನೂನಿನ ಜಾರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.ಈ ಕುರಿತಂತೆ ಕೇಂದ್ರ ಸರ್ಕಾರವು ತ್ವರಿತ ನ್ಯಾಯಾಲಯಗಳ ಪ್ರಕ್ರಿಯೆಗಾಗಿ ಯಾವುದೇ ಕಾನೂನನ್ನು ರಚಿಸುವ ಕಾರ್ಯವನ್ನು ಕೈಗೊಂಡಿಲ್ಲ. ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯದ ಮ್ಯಾಜಿಸ್ಟ್ರೇಟರು ದಾಖಲು ಮಾಡುವಂತಿಲ್ಲ. ಆದರೆ ಪೊಲೀಸರ ದಾಖಲೆಗಳ ಹೊರತಾಗಿ, ಆರೋಪಿ ಹಾಗೂ ಸಾಕ್ಷಿಗಳ ಹೇಳಿಕೆಯು ಬಹುಮುಖ್ಯವಾದ ದಾಖಲೆಯಾಗಿರುವುದರಿಂದ ಅದನ್ನು ಮ್ಯಾಜಿಸ್ಟ್ರೇಟರು ದಾಖಲಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡುವ ಅಗತ್ಯ ಇದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry