ಗುರುವಾರ , ನವೆಂಬರ್ 21, 2019
26 °C

ಅತ್ಯಾಚಾರ ತಡೆ ಮಸೂದೆಗೆ ರಾಷ್ಟ್ರಪತಿ ಅಂಕಿತ

Published:
Updated:

ನವದೆಹಲಿ (ಐಎಎನ್‌ಎಸ್): ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಾಡಲಾದ ಮಸೂದೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂಕಿತ ಹಾಕಿದ್ದಾರೆ.`ಮಸೂದೆಗೆ ಮಂಗಳವಾರ ರಾಷ್ಟ್ರಪತಿಗಳು ಸಹಿ ಹಾಕಿದ್ದು  ಇದನ್ನು ಮುಂದೆ ಕ್ರಿಮಿನಲ್ ಕಾನೂನು (ತಿದ್ದುಪಡಿ) 2013 ಎಂದು ಕರೆಯಲಾಗುತ್ತದೆ' ಎಂದು ಗೃಹ ಸಚಿವಾಲಯದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಈ ಮಸೂದೆಗೆ ಮಾ. 19ರಂದು ಲೋಕಸಭೆಯಲ್ಲಿ ಹಾಗೂ ಮಾ. 21ರಂದು ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. 2012ರ ಡಿ. 16ರಂದು ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ಶಿಫಾರಸು ಮಾಡಲು ರಚಿಸಲಾಗಿದ್ದ ನ್ಯಾಯಮೂರ್ತಿ ಜೆ.ಎಸ್. ವರ್ಮಾ  ಸಮಿತಿ ನೀಡಿದ ಸಲಹೆಗಳನ್ನು ಪರಿಷ್ಕೃತ ಮಸೂದೆ ಒಳಗೊಂಡಿದೆ.ಅತ್ಯಾಚಾರಿಗಳಿಗೆ ಜೀವಾವಧಿವರೆಗೆ ವಿಸ್ತರಿಸಬಹುದಾದ ಕನಿಷ್ಠ 20 ವರ್ಷಗಳ ಶಿಕ್ಷೆ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಲೈಂಗಿಕ ದೌರ್ಜನ್ಯದ ವಿಷಯವೂ ಪರಿಷ್ಕ್ರತ ಮಸೂದೆಯ ವ್ಯಾಪ್ತಿಗೆ ಸೇರುತ್ತದೆ.

ಪ್ರತಿಕ್ರಿಯಿಸಿ (+)