ಅತ್ಯಾಚಾರ: ಪಕ್ಷದಿಂದ ಶಾಸಕರ ಉಚ್ಛಾಟನೆ

7

ಅತ್ಯಾಚಾರ: ಪಕ್ಷದಿಂದ ಶಾಸಕರ ಉಚ್ಛಾಟನೆ

Published:
Updated:

ಮುಂಬೈ (ಪಿಟಿಐ): ಕೆಲಸ ಕೊಡಿಸುವ ಆಮೀಷವೊಡ್ಡಿ 20 ವರ್ಷದ ಯುವತಿಯನ್ನು ನಾಸಿಕ್ ನ ಅತಿಥಿಗೃಹಕ್ಕೆ ಕರೆಯಿಸಿಕೊಂಡು ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾದ ಎನ್‌ಸಿಪಿ ಶಾಸಕ ದಿಲಿಪ್‌ ವಾಘ ಅವರನ್ನು ಶನಿವಾರ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ (ಎನ್‌ಸಿಪಿ) ರಾಜ್ಯಾಧ್ಯಕ್ಷ ಮಧುಕರ್ ಪಿಚಾಡ್ ಅವರು ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಔರಂಗಬಾದ್ ಮೂಲದ ಯುವತಿಗೆ ಕೆಲಸ ಕೊಡಿಸುವ ಆಮೀಷವೊಡ್ಡಿ, ಶಾಸಕ ದಿಲಿಪ್‌ ವಾಘ ಮತ್ತು  ಅವರ ಆಪ್ತ ಕಾರ್ಯದರ್ಶಿ ಮಹೇಶ ಮಾಲಿ ಜೊತೆಗೂಡಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಯುವತಿಯು ಗುರುವಾರ ಸರ್ಕಾರವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ನಂತರ ಶಾಸಕ ಹಾಗೂ ಆತನ ಸಹಾಯಕ ತಲೆಮರೆಸಿಕೊಂಡಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ~ಮಧುಕರ್ ಪಿಚಾಡ್ ಅವರು, ಮಹಾರಾಷ್ಟ್ರ ಸರ್ಕಾರ ಈ ಘಟನೆ ಕುರಿತು ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ~ ಎಂದು ಪಕ್ಷದ ವಕ್ತಾರ ಮದನ್ ಬಾಷ್ನಾ ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಆರ್.ಆರ್.ಪಾಟೀಲ್ ಅವರು, ~ಶಾಸಕನ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದ್ದು, ಈ ಘಟನೆ ಬಗ್ಗೆ ಪೋಲಿಸ್ ಇಲಾಖೆಗೆ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಲಾಗಿದೆ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry