ಅತ್ಯಾಚಾರ: ಭಾರತೀಯ ವೈದ್ಯ ತಪ್ಪಿತಸ್ಥ

7

ಅತ್ಯಾಚಾರ: ಭಾರತೀಯ ವೈದ್ಯ ತಪ್ಪಿತಸ್ಥ

Published:
Updated:

ಸಿಡ್ನಿ (ಐಎಎನ್‌ಎಸ್‌):  ಭಾರತ ಮೂಲದ ವೈದ್ಯನೊಬ್ಬ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನನ್ನು ತಪ್ಪಿತಸ್ಥ ಎಂದು ಮಂಗಳವಾರ ಆಸ್ಟ್ರೇಲಿಯಾ ನ್ಯಾಯಾಲಯ ಹೇಳಿದೆ.ಮನು ಮೈಮ್‌ಬಿಲ್ಲಿ ಗೋಪಾಲ್‌ ಅತ್ಯಾಚಾರ ಎಸಗಿದ ವೈದ್ಯ. ಹೊಟ್ಟೆ­ನೋವು ಎಂದು ಚಿಕಿತ್ಸೆಗೆ ಬಂದಿದ್ದ ಇಬ್ಬರು ಮಹಿಳೆಯರನ್ನು ಪರೀಕ್ಷೆ ಮಾಡುವ ನೆಪದಲ್ಲಿ ಅನುಮತಿ­ಯಿ­ಲ್ಲದೆ  ಜನನಾಂಗದಲ್ಲಿ ಬೆರಳು ತೂರಿಸಿ­­ದ್ದಾನೆ. ಈ ಕಾರಣ ನ್ಯಾಯಾ­ಲಯ ಈತನನ್ನು ತಪ್ಪಿತಸ್ಥ ಎಂದು ಹೇಳಿದೆ.ಈತ ಮೂಲತಃ ಕೇರಳದ ಕೊಚ್ಚಿಯವನು. ಈತನ ಹೆಂಡತಿ ಮಗಳು ಕೊಚ್ಚಿಯಲ್ಲಿಯೇ ವಾಸಿಸು­ತ್ತಾರೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರದ ಸಂಬಂಧ ಪ್ರಕರಣ ದಾಖಲಾಗಿರುವ ವಿಷಯ ತಿಳಿದು ಭಾರತಕ್ಕೆ ಬರಲು ಸಜ್ಜಾಗಿದ್ದ ವೈದ್ಯನನ್ನು ಮೆರ್ಲ್ಬನ್‌  ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry