ಅತ್ಯಾಚಾರ ವಿರೋಧಿಸಿ ಮೌನ ಪ್ರತಿಭಟನೆ

7

ಅತ್ಯಾಚಾರ ವಿರೋಧಿಸಿ ಮೌನ ಪ್ರತಿಭಟನೆ

Published:
Updated:

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಪ್ರಕರಣಗಳನ್ನು ಖಂಡಿಸಿ ರಮಣ ಮಹರ್ಷಿ ಅಂಧರ ಸಂಸ್ಥೆಯ ಸದಸ್ಯರು ನಗರದ ಪುರಭವನದ ಎದುರು  ಶನಿವಾರ ಮೌನ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ‘ಅತ್ಯಾಚಾರ ನಿಲ್ಲಿಸಿ’, ‘ಅತ್ಯಾಚಾರ ತಡೆಗಟ್ಟಿ’ ಎಂಬ ಘೋಷಣೆಗಳನ್ನು ಒಳಗೊಂಡ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿ ದರು.ನಂತರ ಅವಿರಾಮ್‌ ಎಂಬುವರು ನಿರ್ದೇಶಿಸಿರುವ ‘ಇಂಡಿಯಾ ರೇಪ್ಡ್‌’ ಕಿರುಚಿತ್ರದ ಸಿ.ಡಿ ಬಿಡುಗಡೆ ಗೊಳಿಸ ಲಾಯಿತು. ಈ ಬಗ್ಗೆ ಮಾತನಾಡಿದ ಅವಿರಾಮ್‌, ‘ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ಭ್ರಷ್ಟಾಚಾರದ ಸ್ವರೂಪವನ್ನು ಕಿರುಚಿತ್ರದಲ್ಲಿ ಹಿಡಿ ದಿಡುವ ಪ್ರಯತ್ನ ಮಾಡಿದ್ದೇನೆ. ಐದು ನಿಮಿಷಗಳ ಕಿರು ಚಿತ್ರದಲ್ಲಿ ದೇಶದ ಸದ್ಯದ ಸಾಮಾ ಜಿಕ ಸ್ಥಿತಿಯನ್ನು ತೋರಿಸಿದ್ದೇನೆ. ಈ ಕಿರು ಚಿತ್ರವನ್ನು ಯುಟ್ಯೂಬ್‌ಗೆ ಅಪ್‌ ಲೋಡ್‌ ಮಾಡ ಲಾಗಿದೆ’ ಎಂದರು.ಯುಟ್ಯೂಬ್‌ನಲ್ಲಿ warning india raped ಎಂಬ ಹೆಸರಿನಲ್ಲಿರುವ ಕಿರುಚಿತ್ರವನ್ನು  ttps://www.youtube.com/watch?v=zzakIYZpPis ಲಿಂಕ್‌ನ ಮೂಲಕ ವೀಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry