ಅತ್ಯಾಚಾರ: ಶಿಕ್ಷಕನ ಬಂಧನ

7

ಅತ್ಯಾಚಾರ: ಶಿಕ್ಷಕನ ಬಂಧನ

Published:
Updated:

ಬಳ್ಳಾರಿ: ಗಣಿತ ವಿಷಯದ ಶಿಕ್ಷಕನೊಬ್ಬ 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಆರು ತಿಂಗಳಿಂದ ಅತ್ಯಾಚಾರ ಎಸಗಿರುವ ಪ್ರಕರಣ ತಾಲ್ಲೂಕಿನ ಕೊರ್ಲಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಶಾಲೆಯ ಶಿಕ್ಷಕ ಟಿ.ಹನುಮಂತಪ್ಪ (38) ತನ್ನನ್ನು ಬೆದರಿಸಿ ಆರು ತಿಂಗಳಿಂದ ಅತ್ಯಾಚಾರ ಎಸಗಿದ್ದಾಗಿ 13 ವರ್ಷದ ಈ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ.ಓದಿನಲ್ಲಿ ಹಿಂದಿದ್ದ ನನಗೆ ವಿಶೇಷ ಪಾಠ ಮಾಡುವುದಾಗಿ ಹೇಳಿ ವಿಷಯವನ್ನು ಬೇರೆ ಯಾರಿಗಾದರೂ  ತಿಳಿಸಿದರೆ ಪರೀಕ್ಷೆಯಲ್ಲಿ ನಪಾಸು ಮಾಡುವುದಾಗಿ ಬೆದರಿಸಿದ್ದ. ಸಂಜೆ ಶಾಲೆ ಮುಗಿದ ನಂತರ ಶಾಲೆಯ ಕೊಠಡಿಯೊಂದರಲ್ಲಿಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆರು ತಿಂಗಳಿನಿಂದಲೂ ಈ ರೀತಿ ಮಾಡುತ್ತಿದ್ದ~ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.ತಂದೆ- ತಾಯಿ ಇಬ್ಬರೂ ಮೃತಪಟ್ಟಿರುವುದರಿಂದ ಅಜ್ಜಿಯ ಮನೆಯಲ್ಲಿದ್ದುಕೊಂಡು ಓದುತ್ತಿರುವ ಈಕೆ  ನಿತ್ಯವೂ ತಡವಾಗಿ ಮನೆಗೆ ಹೋಗುತ್ತಿದ್ದುದನ್ನು ಕಂಡು ಸಹಪಾಠಿಯೊಬ್ಬಳು ಪ್ರಶ್ನಿಸಿದಾಗ, ಆಕೆ ವಿಷಯವನ್ನು ಬಹಿರಂಗಪಡಿಸಿದ್ದಾಳೆ.

 

ಸಹಪಾಠಿ ಬಾಲಕಿ ಗುರುವಾರ ಶಾಲೆಯ ಇತರ ಶಿಕ್ಷಕರಿಗೆ ಈ ವಿಷಯವನ್ನು ತಿಳಿಸಿದಳು. ನಂತರ ಎಸ್‌ಡಿಎಂಸಿ ಅಧ್ಯಕ್ಷರಿಗೆ ಮಾಹಿತಿ ನೀಡಿದ ಶಿಕ್ಷಕರು ಮೋಕಾ ಪೊಲೀಸರಿಗೆ ತಿಳಿಸಿದರು.ಶಾಲೆಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದರು. ವಿದ್ಯಾರ್ಥಿನಿ ಮತ್ತು ಆತನನ್ನು ವೈದ್ಯಕೀಯ ಪರೀಕ್ಷೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ಕಳುಹಿಸುವುದಾಗಿ ಸಬ್‌ಇನ್ಸ್‌ಪೆಕ್ಟರ್ ಸತೀಶ್ ಹೇಳಿದ್ದಾರೆ. ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆ 376ರ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry