ಅತ್ಯಾಚಾರ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ

5

ಅತ್ಯಾಚಾರ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ

Published:
Updated:

ವಿಜಾಪುರ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದವರು ಸೋಮವಾರ ಇಲ್ಲಿಯ ಬಸವೇಶ್ವರ ಚೌಕ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು.‘ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ’ ಎಂದು ಡಾ.ಸರಸ್ವತಿ ಚಿಮ್ಮಲಗಿ ದೂರಿದರು.ಕರ್ನಾಟಕದಲ್ಲಿಯೂ ಸಾಕಷ್ಟು ಅತ್ಯಾಚಾರ ನಡೆದಿವೆ. ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದ ಕಾರಣ ಮಹಿಳೆಯರಲ್ಲಿ ಅಸುರಕ್ಷತೆಯ ಭಾವ ಕಾಡುತ್ತಿದೆ ಎಂದು ಪದ್ಮಾವತಿ ಗುಡಿ ಆಪಾದಿಸಿದರು.ಬಿ.ಜೆ.ಪಿ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ಭಾಟಿ, ಅನುರಾಧಾ ಕಲಾಲ, ಸುಹಾಸಿನಿ ವಸ್ತ್ರದ, ಕಸ್ತೂರಿ ಮೊಕಾಶಿ, ಫಾತಿಮಾ, ವಿಜಯಲಕ್ಷ್ಮಿ ಹುದ್ದಾರ, ಕಾಶಿಬಾಯಿ ಎಂ. ಬಿರಾದಾರ, ಸುಲೋಚನಾ ಬಡಿಗೇರ, ಹಜರತಮಾ ಪಕಾಲಿ, ಶೋಭಾ ಬೆಳ್ಳುಬ್ಬಿ, ವಾಣಿ ಗೌಡರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪದಾಧಿಕಾರಿಗಳು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸ­ಲಾಗಿದೆ ಎಂದು ಘಟಕದ ಅಧ್ಯಕ್ಷ ಬಸವರಾಜ ಬಿರಾದಾರ ತಿಳಿಸಿದ್ದಾರೆ.ಬಸವರಾಜ ಬೈಚಬಾಳ (ಪ್ರಧಾನ ಕಾರ್ಯದರ್ಶಿ),  ಚಿದಾನಂದ ಔರಂಗಬಾದ, ಪ್ರಹ್ಲಾದ್‌ ಪತ್ತಾರ, ಶ್ರೀನಿವಾಸ ಬಾ. ಪೋಳ, ಶ್ರೀಕಾಂತ ರಾಠೋಡ (ಉಪಾಧ್ಯಕ್ಷರು), ಸಿದ್ದು ಸಿದ್ದಾರಡ್ಡಿ, ಸುಭಾಷ್‌್ ಮಮದಾಪೂರ, ಬಸವರಾಜ ಚಿತ್ತರಗಿ, ಅದೃಶ್ಯಪ್ಪ ವಾಲಿ, ಸಿದ್ರಾಯ ಡೊಳ್ಳಿ, ಪ್ರವೀಣ ಕಂಡಿಗೊಂಡ (ಕಾರ್ಯದರ್ಶಿಗಳು). ಪಾಪುಸಿಂಗ್‌ ರಜಪೂತ (ಖಜಾಂಚಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry