ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿಗೆ ಅರ್ಜಿ ಆಹ್ವಾನ

7

ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Published:
Updated:

ವಿಜಾಪುರ: ಇಲ್ಲಿನ ಮಹಿಳಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ನೀಡಲಾಗುತ್ತಿರುವ ಡಾ.ಸೋಮಶೇಖರ ಮುನವಳ್ಳಿ ಮತ್ತು ಮಾಲತಿ ಮುನವಳ್ಳಿ ಹೆಲ್ತ್ ಅಂಡ್ ವೆಲ್‌ನೆಸ್ ಫೌಂಡೇಶನ್ (ಅಮೆರಿಕ) ಪ್ರಾಯೋಜಿತ `ಎಸ್.ಎಫ್. ಉಪ್ಪಿನ ಐಎಫ್‌ಎಸ್ ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ~ಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.ಪ್ರಶಸ್ತಿ ಐದು ಸಾವಿರ ರೂಪಾಯಿಗಳ ನಗದು ಮತ್ತು ಫಲಕ ಒಳಗೊಂಡಿರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರುವ ಮತ್ತು 2012 ಫೆಬ್ರುವರಿ 28ಕ್ಕೆ 50 ವರ್ಷದ ಒಳಗಿನ ಪತ್ರಕರ್ತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು.ನಾಮನಿರ್ದೇಶನಗೊಳ್ಳುವ ಪತ್ರಕರ್ತೆಯರ  ವಿವರಗಳನ್ನು ಇದೇ 28ರೊಳಗಾಗಿ ಅಧ್ಯಕ್ಷರು, `ಎಸ್.ಎಫ್. ಉಪ್ಪಿನ ಐಎಫ್‌ಎಸ್ ಅತ್ಯುತ್ತಮ ಮಹಿಳಾ ಪತ್ರಕರ್ತೆ ಪ್ರಶಸ್ತಿ~ ಆಯ್ಕೆ ಸಮಿತಿ, ಕುಲಸಚಿವರ ಕಾರ್ಯಾಲಯ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪುರ- 586101 ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry