ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 25 ಶಿಕ್ಷಕರು

7

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 25 ಶಿಕ್ಷಕರು

Published:
Updated:

ಹಾವೇರಿ:  11 ಜನ ಪ್ರೌಢಶಾಲೆಯ ಶಿಕ್ಷಕರು ಹಾಗೂ 14 ಜನ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 25 ಜನ ಶಿಕ್ಷಕರು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಇದೇ 5ರಂದು ಬೆಳಿಗ್ಗೆ ಜಿಲ್ಲಾ ಗುರು ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಸಕ್ಕರೆ, ಮುಜರಾಯಿ, ಸಣ್ಣಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು: ಪ್ರೌಢಶಾಲಾ ವಿಭಾಗದಲ್ಲಿ ಚಿಕ್ಕಬಾಸೂರ (ಬ್ಯಾಡಗಿ) ಎಸ್.ಕೆ.ವಿ. ಪ್ರೌಢಶಾಲೆಯ ಆರ್.ಎಸ್.ಸರ್ವೇರ, ಮಂತಗಿ (ಹಾನಗಲ್) ಸರ್ಕಾರಿ ಪ್ರೌಢಶಾಲೆ ಬಸನಗೌಡ್ರ ಆರ್.ಜೆ., ಬೈಚವಳ್ಳಿ (ಹಾನಗಲ್) ಸರ್ಕಾರಿ ಪ್ರೌಢಶಾಲೆಯ ಆರ್.ಆರ್.ಪವಾರ, (ಹಾನಗಲ್) ಮಹದೇವಪ್ಪ ಸಿ. ಕೋಟಿ, (ಹಾವೇರಿ) ಹುಕ್ಕೇರಿಮಠ ಪ್ರೌಢಶಾಲೆ

ಎ.ಪಿ.ದುಮ್ಮಾಳ, ಹಂಸಭಾವಿಯ (ಹಿರೇಕೆರೂರ) ಎನ್. ಎಂ.ಡಿ. ಶಾಲೆಯ ಎಚ್.ಎಚ್. ಗಿಡ್ಡಪ್ಪನವರ, (ರಾಣೆಬೆನ್ನೂರ) ಬಿ.ಕೆ. ಪ್ರೌಢಶಾಲೆಯ ಸುರೇಶಬಿಂದು ಮಾಧವ ಜಿ, ಹಿರೇಮುಗದೂರ (ಸವಣೂರ) ಟಿ.ಎಂ.ಎ.ಇ.ಎಸ್. ಪ್ರೌಢಶಾಲೆಯ ವೀರಭದ್ರಯ್ಯ ಎಸ್. ಹಿರೇಮಠ, (ಸವಣೂರ) ಸರ್ಕಾರಿ ಪ್ರೌಢಶಾಲೆಯ ಮಲ್ಲಿಕಾರ್ಜುನ ಶಾಂತಗಿರಿ, (ಶಿಗ್ಗಾವಿ) ಸರ್ಕಾರಿ ಉರ್ದು ಶಾಲೆಯ ವಿನೋದಾ ಪಾಟೀಲ, ಎಸ್‌ಎಂಎಸ್ ಬಾಲಿಕೆಯರ ಪ್ರೌಢಶಾಲೆ(ಹಾವೇರಿ) ಲತಾ ಹಳಕೊಪ್ಪ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಳ್ಳಿಹಾಳ(ಹಾವೇರಿ) ಪ್ರಾಥಮಿಕ ಶಾಲೆಯ ಶಶಿಕಲಾ ಕಲ್ಮನಿ, ಕುಮ್ಮೂರು (ಬ್ಯಾಡಗಿ) ಪ್ರಾಥಮಿಕ ಶಾಲೆಯ ಎಂ.ಸಿ.ಬಿಲ್ಲಹಳ್ಳಿ, ಸುರಳೇಶ್ವರ (ಹಾನಗಲ್) ಪ್ರಾಥಮಿಕ ಶಾಲೆಯ ಕೆ.ಎಸ್.ಪಂಚಾಳ, ತಿಮ್ಮಾಪುರ ತಾಂಡಾ (ಹಾವೇರಿ) ಪ್ರಾಥಮಿಕ ಶಾಲೆಯ ಜೆ.ಆರ್.ಲಮಾಣಿ, ರಟ್ಟಿಹಳ್ಳಿ (ಹಿರೇಕೆರೂರು) ಪ್ರಾಥಮಿಕ ಶಾಲೆಯ ವಿ.ಆರ್. ಪೂಜಾರ, (ರಾಣೆಬೆನ್ನೂರ) ಪ್ರಾಥಮಿಕ ಶಾಲೆಯ ನಂ-4 ಎಸ್.ಎಂ.ಮಲ್ಲನಗೌಡ್ರ, ಯರೇಕುಪ್ಪಿ (ರಾಣೆಬೆನ್ನೂರ) ಉರ್ದು ಪ್ರಾಥಮಿಕ ಶಾಲೆಯ ಆರ್.ಎಂ.ಮುಲ್ಲಾ, ದೇವರಗುಡ್ಡ (ರಾಣೆಬೆನ್ನೂರ) ಪ್ರಾಥಮಿಕ ಶಾಲೆಯ ಎನ್.ಸಿ.ಕಡಿಯವರ, ಹಳೇಮೆಳ್ಳಾಗಟ್ಟಿ (ಸವಣೂರ) ಪ್ರಾಥಮಿಕ ಶಾಲೆಯ ಶಿವಕುಮಾರ ಎ.ಎಚ್., ಹತ್ತಿಮತ್ತೂರ (ಸವಣೂರ) ಪ್ರಾಥಮಿಕ ಶಾಲೆಯ ಬಸನಗೌಡ ಎಸ್. ಎ, ಕಲಿವಾಳ (ಸವಣೂರ) ಪ್ರಾಥಮಿಕ ಶಾಲೆಯ ಬಸವಣೆಪ್ಪ ಕೆ. ಹತ್ತಿಕಾಳ, ತಡಸ (ಶಿಗ್ಗಾವಿ) ಪ್ರಾಥಮಿಕ ಶಾಲೆಯ ಎಸ್.ವಿ.ಸೋಮಣ್ಣನವರ, ಹುನಗುಂದ (ಶಿಗ್ಗಾವಿ) ಪ್ರಾಥಮಿಕ ಶಾಲೆಯ ವೈ.ಎಸ್.ಮಿರಜಕರ, ಜೊಂಡಲಗಟ್ಟಿ (ಶಿಗ್ಗಾವಿ) ಪ್ರಾಥಮಿಕ ಶಾಲೆಯ ನಿಂಗಪ್ಪ ಕೆ., ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸಿಗೆ ಆಯ್ಕೆಯಾಗಿದ್ದಾರೆ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry