ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ

7
ಕೊಕ್ಕರ್ಣೆ ಸಿಂಡಿಕೇಟ್ ರೈತ ಸೇವಾ ಸಹಕಾರಿ ಸಂಘ

ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ

Published:
Updated:

ಕೊಕ್ಕರ್ಣೆ (ಬ್ರಹ್ಮಾವರ): ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಉತ್ತಮ ವ್ಯವಹಾರ ನಡೆಸಿ ಸಾಧಿಸಿರುವ ಪ್ರಗತಿಗಾಗಿ 2012-–13ನೇ ಸಾಲಿನ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ.ಇತ್ತೀಚೆಗೆ ನಡೆದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಡಾ ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಂಘದ ಅಧ್ಯಕ್ಷ ಶುಭಕರ ಶೆಟ್ಟಿ ವಂಡಾರು ಕಕ್ಕುಂಜೆ ಮತ್ತು ಆಡಳಿತ ನಿರ್ದೇಶಕ ಎಸ್.ಲಕ್ಷ್ಮಣ ಗಡಿಯಾರ್ ಅವರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನಿತ್ತು ಗೌರವಿಸಿದರು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಹಾಗೂ ವಲಯ ಮೇಲ್ವಿಚಾರಕ ರಾಜಾರಾಮ್ ಶೆಟ್ಟಿ, ಸಂಘದ ಪ್ರಸ್ತುತ ಆಡಳಿತ ನಿರ್ದೇಶಕ ಬಿ.ಶ್ರೀನಿವಾಸ ಬಾಯರಿ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿ­ತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry