ಅಥ್ಲೆಟಿಕ್ಸ್‌: ಕರ್ನಾಟಕಕ್ಕೆ ಮೂರು ಪದಕ

7

ಅಥ್ಲೆಟಿಕ್ಸ್‌: ಕರ್ನಾಟಕಕ್ಕೆ ಮೂರು ಪದಕ

Published:
Updated:

ಕೊಚ್ಚಿ: ಕರ್ನಾಟಕ ತಂಡದವರು ಭಾನುವಾರ ಇಲ್ಲಿ ಆರಂಭವಾದ 25ನೇ ರಾಷ್ಟ್ರೀಯ ಅಂತರ ವಲಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕ ಜಯಿಸಿದ್ದಾರೆ.

ಮಹಾರಾಜ ಕಾಲೇಜ್‌ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯ 18 ವರ್ಷದೊಳಗಿನವರ ಬಾಲಕಿ ಯರ ವಿಭಾಗದಲ್ಲಿ ಜಿ.ಕೆ.ನಮಿತಾ ಷಾಟ್‌ಪಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಅವರು ಕಬ್ಬಿಣದ ಗುಂಡನ್ನು 12.98 ಮೀ. ದೂರ ಎಸೆದರು. ಡಿಸ್ಕಸ್‌ ಥ್ರೋನಲ್ಲಿ ಕೆ.ಯು.ಲಿಖಿತಾ ಎರಡನೇ ಸ್ಥಾನ ಪಡೆದರು. ಅವರು ಡಿಸ್ಕಅನ್ನು 37.5 ಮೀಟರ್‌ ದೂರ ಎಸೆದರು.

14 ವರ್ಷದೊಳಗಿನವರ ಬಾಲಕಿ ಯರ ವಿಭಾಗದ ಲಾಂಗ್‌ಜಂಪ್‌ನಲ್ಲಿ ರಾಜ್ಯದ ಬಿ.ಟಾಮಿ ವೈಷ್ಣವಿ ಚಿನ್ನದ ಪದಕ ಗೆದ್ದರು. ಅವರು 5.3 ಮೀ. ದೂರ ಜಿಗಿದರು. 20 ವರ್ಷದೊಳಗಿನವರ ವಿಭಾಗದ ಷಾಟ್‌ಪಟ್‌ನಲ್ಲಿ ಯು.ನಿಶಾ ಕಂಚಿನ ಪದಕ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry