ಶನಿವಾರ, ಫೆಬ್ರವರಿ 27, 2021
28 °C

ಅಥ್ಲೆಟಿಕ್ಸ್‌ ರೋಮಾಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥ್ಲೆಟಿಕ್ಸ್‌ ರೋಮಾಂಚನ

ಬೋಲ್ಟ್‌  ಮಿಂಚುವರೇ?

ಜಮೈಕದ ಉಸೇನ್ ಬೋಲ್ಟ್‌ ಈ ಬಾರಿಯೂ ಮೂರು ಚಿನ್ನ ಗೆದ್ದು ಇತಿಹಾಸ ನಿರ್ಮಿಸುವರೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಮುಂದಿನ ಕೆಲ ದಿನಗಳಲ್ಲಿ ಉತ್ತರ ಲಭಿಸಲಿದೆ.ಬೀಜಿಂಗ್‌ ಮತ್ತು ಲಂಡನ್‌ ಕೂಟದಲ್ಲಿ 100 ಮೀ., 200 ಮೀ. ಮತ್ತು 4X100 ಮೀ. ರಿಲೇನಲ್ಲಿ ಬೋಲ್ಟ್‌ ಚಿನ್ನ ಗೆದ್ದಿದ್ದರು. ‘ಟ್ರಿಪಲ್‌’ ಚಿನ್ನದ ಕನಸಿನೊಂದಿಗೆ ಇದೀಗ ರಿಯೊದಲ್ಲಿದ್ದಾರೆ.100 ಮೀ. ಫೈನಲ್‌

*  ಆಗಸ್ಟ್‌ 15, ಬೆಳಿಗ್ಗೆ 6.55ಕ್ಕೆ

    (ಭಾರತೀಯ ಕಾಲಮಾನ)

*  ಆಗಸ್ಟ್‌ 14, ರಾತ್ರಿ 10.25

      (ಬ್ರೆಜಿಲ್‌ ಕಾಲಮಾನ)100 ಮೀ. ಸ್ಪ್ರಿಂಟ್‌ ಸಾಮಾನ್ಯವಾಗಿ ಯುವಕರ ಸ್ಪರ್ಧೆ ಎನಿಸಿದೆ. ಈ ಬಾರಿ ಹಾಗಾಗದು. ಏಕೆಂದರೆ ಬೋಲ್ಟ್‌ ಮತ್ತು ಗಾಟ್ಲಿನ್‌ ಅವರೇ ಪ್ರಧಾನ ಆಕರ್ಷಣೆ ಎನಿಸಿಕೊಂಡಿದ್ದಾರೆ. ಗಾಟ್ಲಿನ್‌ಗೆ ಈಗ 34 ವಯಸ್ಸು.ಆಗಸ್ಟ್‌ 21 ರಂದು  ಬೋಲ್ಟ್‌ 30ನೇ ಹುಟ್ಟುಹಬ್ಬ ಆಚರಿಸುವರು. ಬೋಲ್ಟ್‌ ಅವರು ಗಾಟ್ಲಿನ್‌ಗೆ ಇಟ್ಟಿರುವ ಅಡ್ಡಹೆಸರು ‘ಓಲ್ಡ್‌ ಮ್ಯಾನ್‌’. ಅದಕ್ಕೆ ಗಾಟ್ಲಿನ್‌ ಜಮೈಕದ ಓಟಗಾರನನ್ನು  ತಮಾಷೆಯಿಂದ ‘ಮಧ್ಯಮ ವಯಸ್ಸಿನ ವ್ಯಕ್ತಿ’ ಎಂದು ಕರೆಯುವರು.ಯಾರಿಂದ ಪೈಪೋಟಿ?

ಬೋಲ್ಟ್‌ ಅವರಿಗೆ ಅಮೆರಿಕದ ಜಸ್ಟಿನ್‌ ಗಾಟ್ಲಿನ್‌ ಮತ್ತು ಫ್ರಾನ್ಸ್‌ನ ಜಿಮ್ಮಿ ವಿಕೋ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ಗಾಟ್ಲಿನ್‌ 2016 ರಲ್ಲಿ 100 ಮೀ. ಓಟದಲ್ಲಿ ಅತಿವೇಗದ ಸಮಯ ಕಂಡುಕೊಂಡಿದ್ದಾರೆ.ಪ್ರಮುಖರು

ಶೆಲ್ಲಿ ಆ್ಯನ್‌ ಫ್ರೇಸರ್‌


ಜಮೈಕದ ಮಹಿಳಾ ಅಥ್ಲೀಟ್‌ ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರಸ್ತುತ ವಿಶ್ವದ ಅತಿವೇಗದ ಓಟಗಾರ್ತಿ ಎನಿಸಿದ್ದಾರೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ಅವರು 200 ಮೀ. ಓಟದಲ್ಲಿ ಬೆಳ್ಳಿ ಜಯಿಸಿದ್ದರು. ರಿಯೊದಲ್ಲಿ ‘ವೇಗದ ರಾಣಿ’ ಎನಿಸಿಕೊಳ್ಳುವರೇ ಎಂಬುದನ್ನು ನೋಡಬೇಕು. ವಿಶ್ವಚಾಂಪಿಯನ್‌ಷಿಪ್‌ 7  ಚಿನ್ನ, 2 ಬೆಳ್ಳಿ,  ಒಲಿಂಪಿಕ್‌ 2 ಚಿನ್ನ 2 ಬೆಳ್ಳಿಮೋ ಫರಾ

ಬ್ರಿಟನ್‌ನ ಮೋ ಫರಾ ಲಂಡನ್‌ ಒಲಿಂಪಿಕ್‌ ಕೂಟದ 5000 ಮೀ. ಮತ್ತು 10 ಸಾವಿರ ಮೀ. ಓಟದಲ್ಲಿ ಚಿನ್ನ ಗೆದ್ದಿದ್ದರು. ರಿಯೊದಲ್ಲೂ ಅದೇ ಸಾಧನೆ ಪುನರಾವರ್ತಿಸುವರೇ ಎಂದು ನೋಡಬೇಕು. ವಿಶ್ವಚಾಂಪಿಯನ್‌ಷಿಪ್‌ 5  ಚಿನ್ನ, 1 ಬೆಳ್ಳಿ

ಡೇವಿಡ್‌ ರುದಿಶಾ

ಕೀನ್ಯಾದ ರುದಿಶಾ 800 ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿದ್ದು, ಲಂಡನ್‌ನಲ್ಲಿ ಈ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಸತತ ಎರಡನೇ ಚಿನ್ನದ ಕನಸಿನೊಂದಿಗೆ ರಿಯೊದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಶ್ವಚಾಂಪಿಯನ್‌ಷಿಪ್‌ 2  ಚಿನ್ನ

ಆ್ಯಲಿಸನ್‌ ಫೆಲಿಕ್ಸ್‌

ಅಮೆರಿಕದ ಆ್ಯಲಿಸನ್‌ ಫೆಲಿಕ್ಸ್‌ 100ಮೀ., 200 ಮೀ. ಮತ್ತು 400 ಮೀ. ನಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಈಗಾಗಲೇ ನಾಲ್ಕು ಚಿನ್ನ ಹಾಗೂ ಎರಡು ಬೆಳ್ಳಿ ಜಯಿಸಿದ್ದು, ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದಾರೆ. ವಿಶ್ವಚಾಂಪಿಯನ್‌ಷಿಪ್‌

9  ಚಿನ್ನ, 3 ಬೆಳ್ಳಿ, 1  ಕಂಚು

ತಿರುನೇಶ್‌ ದಿಬಾಬ

ಇಥಿಯೋಪಿಯದ ದೂರ ಅಂತರದ ಓಟಗಾರ್ತಿ ತಿರುನೇಶ್‌ ದಿಬಾಬ 10 ಸಾವಿರ ಮೀಟರ್‌ ಓಟದಲ್ಲಿ ‘ಹ್ಯಾಟ್ರಿಕ್‌’ ಚಿನ್ನ ಗೆದ್ದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ವಿಶ್ವಚಾಂಪಿಯನ್‌ಷಿಪ್‌ 5  ಚಿನ್ನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.