ಬುಧವಾರ, ನವೆಂಬರ್ 13, 2019
22 °C

ಅಥ್ಲೆಟಿಕ್ಸ್: ಕವಿತಾಗೆ ಸ್ವರ್ಣ

Published:
Updated:

ಪಟಿಯಾಲ: ಏಷ್ಯನ್ ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದಿರುವ ಹೆಗ್ಗಳಿಕೆಯ ಕವಿತಾ ರಾವುತ್ ಇಲ್ಲಿ ನಡೆಯುತ್ತಿರುವ 17ನೇ ಫೆಡರೇಷನ್ ಕಪ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಮಂಗಳವಾರ ಮಹಿಳಾ ವಿಭಾಗದ 10,000 ಮೀಟರ್ಸ್ ಓಟವನ್ನು 35ನಿಮಿಷ 30.21ಸೆಕೆಂಡುಗಳಲ್ಲಿ ಕ್ರಮಿಸಿ ಮೊದಲಿಗರಾಗಿ ಗುರಿ ಮುಟ್ಟಿದರು.ಎನ್‌ಐಎಸ್ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರದವರೇ ಆದ ಲಲಿತಾ ಬಾಬರ್, ಮೋನಿಕಾ ಅತಾರೆ, ಮಾನಿಷಾ ಸಾಳುಂಕೆ ಕ್ರಮವಾಗಿ ಆ ನಂತರದ ಸ್ಥಾನಗಳನ್ನು ಪಡೆದರು.

ಪ್ರತಿಕ್ರಿಯಿಸಿ (+)