ಶುಕ್ರವಾರ, ಮೇ 14, 2021
32 °C

ಅಥ್ಲೆಟಿಕ್ಸ್: ಖ್ಯಾತಿ ಕೂಟ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥ್ಲೆಟಿಕ್ಸ್: ಖ್ಯಾತಿ ಕೂಟ ದಾಖಲೆ

ಚೆನ್ನೈ:
ಕರ್ನಾಟಕದ ಖ್ಯಾತಿ ವಖಾರಿಯಾ ಮಂಗಳವಾರ ಇಲ್ಲಿ ಆರಂಭವಾದ 53ನೇ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಪೋಲ್ ವಾಲ್ಟ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದ್ದಾರೆ.ಖ್ಯಾತಿ (4 ಮೀಟರ್ ಎತ್ತರ) ಅವರು 4 ವರ್ಷಗಳ ಹಿಂದೆ ತಮಿಳುನಾಡಿನ ವಿ.ಎಸ್.ಸುರೇಖಾ (3.95 ಮೀ. ಎತ್ತರ) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಈ ಕೂಟದಲ್ಲಿ ಸುರೇಖಾ ಎರಡನೇ ಸ್ಥಾನ ಪಡೆದರು.100 ಮೀಟರ್ ಓಟದಲ್ಲಿ ಮಹಾರಾಷ್ಟ್ರದ ಅನಿರುಧ್ ಕಾಳಿದಾಸ್ ಹಾಗೂ ಪಶ್ಚಿಮ ಬಂಗಾಳದ ಆಶಾ ರಾಯ್ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು.ಹಾಕಿ: ಕರ್ನಾಟಕಕ್ಕೆ ಗೆಲುವು

ಪುಣೆ (ಪಿಟಿಐ): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ `ಹಾಕಿ ಇಂಡಿಯಾ' ಆಶ್ರಯದ ಪುರುಷರ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 5-2 ಗೋಲುಗಳಿಂದ ಭಾರತ ಕ್ರೀಡಾ ಪ್ರಾಧಿಕಾರ ತಂಡವನ್ನು (ಎಸ್‌ಎಐ) ಮಣಿಸಿದರು.ಕರ್ನಾಟಕ ತಂಡದ ನಿಕಿನ್ ತಿಮ್ಮಯ್ಯ (13ನೇ, 43ನೇ ನಿಮಿಷ), ಎಸ್.ಕೆ.ಉತ್ತಪ್ಪ (42ನೇ ನಿ.), ಎಂ.ಬಿ.ಅಯ್ಯಪ್ಪ (70ನೇ ನಿ.) ಚೆಂಡನ್ನು ಗುರಿ ಸೇರಿಸಿದರು. 28ನೇ ನಿಮಿಷದಲ್ಲಿ ಉಡುಗೊರೆ ಗೋಲು ಲಭಿಸಿತು. ಎಸ್‌ಎಐ ತಂಡದ ಪಾಲ್ ರಾಜು (37ನೇ ನಿ.) ಹಾಗೂ ಸುನಿಲ್ ಯಾದವ್ (51ನೇ ನಿ.) ಗೋಲು ಗಳಿಸಿದರು.ಕ್ರಿಕೆಟ್: ಜೆಪಿಎಸ್‌ಸಿ ತಂಡಕ್ಕೆ ಜಯ

ಬೆಂಗಳೂರು: ಜೆ.ಪಿ.ಎಸ್.ಸಿ ಕ್ರಿಕೆಟ್ ಅಕಾಡೆಮಿ ಹಾಗೂ ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ ತಂಡಗಳು ಇಲ್ಲಿ ನಡೆಯುತ್ತಿರುವ ಹೆರಾನ್ಸ್ ಕ್ರಿಕೆಟ್ ಕ್ಲಬ್     ಆಶ್ರಯದ ಸರ್.ಎಂ.ವಿಶ್ವೇಶ್ವರಯ್ಯ ಮೆಮೋರಿಯಲ್ ಅಂತರ ಅಕಾಡೆಮಿ 17 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ಸಾಧಿಸಿವೆ.ಸಂಕ್ಷಿಪ್ತ ಸ್ಕೋರ್: ಜೆ.ಪಿ.ಸಿ.ಸಿ: 28 ಓವರ್‌ಗಳಲ್ಲಿ 6 ವಿಕೆಟ್‌ಗೆ 225 (ನಿಖಿಲ್ 80; ಶ್ರಾವಣ್ 23ಕ್ಕೆ2); ಡಿಟಿಡಿಸಿ: 28 ಓವರ್‌ಗಳಲ್ಲಿ 9 ವಿಕೆಟ್‌ಗೆ 216 (ಸಂಜಯ್ 83; ಅಚ್ಚುತ್ 31ಕ್ಕೆ3)ಮಯ್ಯಾಸ್ ಇಲೆವೆನ್: 25 ಓವರ್‌ಗಳಲ್ಲಿ 3 ವಿಕೆಟ್‌ಗೆ 206 (ರುಮಾನ್ 49); ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ: 24.4 ಓವರ್‌ಗಳಲ್ಲಿ 3 ವಿಕೆಟ್‌ಗೆ 209 (ಅಜಯ್ ಸೂರ್ಯ 125).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.