ಅಥ್ಲೆಟಿಕ್ಸ್: ಜೆಎಸ್‌ಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

7

ಅಥ್ಲೆಟಿಕ್ಸ್: ಜೆಎಸ್‌ಎಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

Published:
Updated:

ಧಾರವಾಡ: ಒಟ್ಟು 25 ಪದಕಗಳನ್ನು ಬೇಟೆ ಯಾಡಿದ ಧಾರವಾಡದ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ್ ಗುಬ್ಬಿ ವಿಜ್ಞಾನ ಕಾಲೇಜು ತಂಡವು ಶುಕ್ರವಾರ ಇಲ್ಲಿ ಮುಕ್ತಾಯವಾದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ ಕೂಟದಲ್ಲಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಒಟ್ಟು 11 ಚಿನ್ನ, 7 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ಜೆಎಸ್‌ಎಸ್ ಕಾಲೇಜು ತಂಡ ಈ ಗೌರವ ಪಡೆಯಿತು. ಪುರುಷರ ವಿಭಾಗದಲ್ಲಿ ಜೆಎಸ್‌ಎಸ್ ಕಾಲೇಜು ಟೀಮ್ ಚಾಂಪಿಯನ್‌ಷಿಪ್ ಹಾಗೂ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಮಹಾವಿದ್ಯಾಲಯ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಜೆಎಸ್‌ಎಸ್ ಕಾಲೇಜು ಟೀಮ್ ಚಾಂಪಿಯನ್‌ಷಿಪ್ ಹಾಗೂ ಧಾರವಾಡದ ಕರ್ನಾಟಕ ಕಾಲೇಜು ರನ್ನರ್ ಅಪ್ ಗೌರವ ಪಡೆದವು.ಕರ್ನಾಟಕ ಕಾಲೇಜಿನ ಅಥ್ಲೀಟ್ ಪ್ರಿಯಾಂಕಾ ಕಾಳಗಿ 100 ಮೀ. ಓಟವನ್ನು ಕೇವಲ 12.26 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದರು. ಈ ಮೂಲಕ ಅವರು 2003ರಲ್ಲಿ ಬೆಳಗಾವಿಯ ದಯಾ ಕುಡಚಿಕರ್ ನಿರ್ಮಿಸಿದ್ದ 12.30 ಸೆ. ದಾಖಲೆಯನ್ನು ಅಳಿಸಿಹಾಕಿದರು. 200 ಮೀ. ಓಟದಲ್ಲಿ ಸಹ ಚಿನ್ನದ ಬೇಟೆಯಾಡಿದ್ದ ಪ್ರಿಯಾಂಕಾ ಕೂಟದ ಉತ್ತಮ ಮಹಿಳಾ ಅಥ್ಲೀಟ್ ಪ್ರಶಸ್ತಿಗೆ ಪಾತ್ರರಾದರು. ಪುರುಷರ  ವಿಭಾಗದಲ್ಲಿ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನ ರಾಜು ಬಣಜಿ ಉತ್ತಮ ಅಥ್ಲೀಟ್ ಪ್ರಶಸ್ತಿ ಪಡೆದರು.ಫಲಿತಾಂಶ

ಪುರುಷರು,100 ಓಟ: ರಾಜು ಬಣಜಿ (ಎಸ್.ಕೆ. ಕಲಾ ಮತ್ತು ಎಚ್‌ಎಸ್‌ಕೆ ವಿಜ್ಞಾನ ಕಾಲೇಜು, ಧಾರವಾಡ)-1. ಸಂದೀಪ್ ಪಿ. ನಾಯ್ಕ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಮಟಾ)-2. ರಿಜ್ವಾನ್ ಬೆಂಡಿಗೇರಿ (ಜೆಎಸ್‌ಎಸ್ ಕಾಲೇಜು, ಧಾರವಾಡ)-3. (ಕಾಲ: 11.31 ಸೆಕೆಂಡ್)

21 ಕಿ.ಮೀ. ಹಾಫ್ ಮ್ಯಾರಥಾನ್: ಶಿವಾನಂದ ಹತ್ತಿಕಟಗಿ (ಜೆಎಸ್‌ಎಸ್ ಕಾಲೇಜು, ಧಾರವಾಡ)-1, ಕೆ. ಕಾಶಪ್ಪ (ಪಿ.ಜಿ. ಜಿಮ್ಖಾನಾ, ಕವಿವಿ)-2. ಲಕ್ಕಪ್ಪ ಎಸ್. ಬೆಣ್ಣಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡ)-3. (ಕಾಲ: 1 ಗಂಟೆ 9 ನಿ. 47 ಸೆ.)

400 ಮೀ. ಹರ್ಡಲ್ಸ್: ಸುಧೀರ್ ಎಂ. ಗೌಡ (ಸ.ಪ್ರ. ದ. ಕಾಲೇಜು, ಕುಮಟಾ)-1, ಚಂದ್ರಶೇಖರ್ ಗೌಡ (ಎಸ್‌ಡಿಎಂ ಪದವಿ ಕಾಲೇಜು, ಹೊನ್ನಾವರ)-2, ಕೊಸ್ಟಾನ್ಸಿಕೊ (ಎಸ್‌ಡಿಎಂ ಪದವಿ ಕಾಲೇಜು, ಹೊನ್ನಾವರ)- 3. (ಕಾಲ: 1 ನಿ. 2.05 ಸೆ.)

ಪೋಲ್‌ವಾಲ್ಟ್: ಕೃಷ್ಣಪ್ಪ ನಾಯ್ಕ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭಟ್ಕಳ)-1. ಹರೀಶ್ ನಾಯ್ಕ (ಸ.ಪ್ರ.ದ. ಕಾಲೇಜು, ಭಟ್ಕಳ)-2, ವಿನೋದ್ ನಾಯ್ಕ (ಸ.ಪ್ರ.ದ. ಕಾಲೇಜು, ಹೊನ್ನಾವರ)-3. (ಎತ್ತರ: 3.12 ಮೀ.) 

ಹ್ಯಾಮರ್ ಥ್ರೋ: ಆದಿತ್ಯ ಹೆಗ್ಡೆ (ಎಂಇಎಸ್ ವಾಣಿಜ್ಯ ಕಾಲೇಜು, ಶಿರಸಿ)-1. ಎಚ್.ಕೆ. ನಚಿಕೇತ್ (ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜು)-2, ಜಿ.ಜಿ. ಮಂಜುನಾಥ್ (ಕರ್ನಾಟಕ ಕಾಲೇಜು, ಧಾರವಾಡ)-3. (ದೂರ: 37.59 ಮೀ.)  

4 ಗಿ 400 ಮೀ. ರಿಲೆ: ಜೆಎಸ್‌ಎಸ್ ಕಾಲೇಜು ತಂಡ-1.  ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಮಟಾ-2, ಎಸ್‌ಡಿಎಂ ಕಾಲೇಜು, ಹೊನ್ನಾವರ-3. (ಕಾಲ: 3 ನಿ. 33.75 ಸೆ.)

ಮಹಿಳೆಯರು: 100 ಮೀ. ಓಟ: ಪ್ರಿಯಾಂಕಾ ಕಾಳಗಿ (ಕರ್ನಾಟಕ ಕಾಲೇಜು, ಧಾರವಾಡ)-1. ಪ್ರತಿಮಾ ಕುಲಕರ್ಣಿ (ಜೆಎಸ್‌ಎಸ್ ಕಾಲೇಜು, ಧಾರವಾಡ)-2. ಶ್ರೀಮತಿ ಎಸ್.ಗೌಡ (ಸ.ಪ್ರ.ದ. ಕಾಲೇಜು, ಕುಮಟಾ)-3.(ಕಾಲ: 12.26 ಸೆ.)

400 ಮೀ. ಹರ್ಡಲ್ಸ್: ಎನ್. ಅನಿತಾ (ಕರ್ನಾಟಕ ಕಾಲೇಜು)-1, ಶ್ರುತಿ ಶಿರಗುಪ್ಪಿ (ಜೆಎಸ್‌ಎಸ್ ಮಂಜುನಾಥೇಶ್ವರ ಪದವಿ ಕಾಲೇಜು, ಧಾರವಾಡ)-2, ಅಪರ್ಣಾ ಬಂಡೇಕರ್ (ಪಿ.ಜಿ. ಜಿಮ್ಖಾನಾ)-3. (ಕಾಲ: 1ನಿ. 06.4 ಸೆ.) 

ಹ್ಯಾಮರ್ ಥ್ರೋ: ಎಚ್.ಕೆ. ನಿವೇದಿತಾ (ಎಂ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜು, ಶಿರಸಿ)-1.ನಿಖಿತಾ ಬಂಡೇಕರ್ (ಶಿವಾಜಿ ಕಲಾ ಮತ್ತು ವಾಣಿಜ್ಯ ಕಾಲೇಜು, ಕಾರವಾರ)-2, ನೀಲವ್ವ ಕುಂಬಾರ (ಕರ್ನಾಟಕ ಕಾಲೇಜು)-3.  (ದೂರ: 32.88 ಮೀ.)

4ಗಿ400 ಮೀ. ರಿಲೆ: ಪಿ.ಜಿ. ಜಿಮ್ಖಾನಾ, ಧಾರವಾಡ-1. ಕಾಡಸಿದ್ಧೇಶ್ವರ ಕಲಾ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಕಾಲೇಜು-2. ಜೆಎಸ್‌ಎಸ್ ಕಾಲೇಜು, ಧಾರವಾಡ. (ಕಾಲ: 5 ನಿ. 15.13 ಸೆ.)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry