ಅಥ್ಲೆಟಿಕ್ಸ್: ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

7

ಅಥ್ಲೆಟಿಕ್ಸ್: ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

Published:
Updated:

ಗದಗ: ದಕ್ಷಿಣ ಕನ್ನಡ ಜಿಲ್ಲಾ ತಂಡ ಭಾನುವಾರ ಇಲ್ಲಿ ಮುಕ್ತಾಯಗೊಂಡ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕ್ರೀಡಾಕೂಟದಲ್ಲಿ ಒಟ್ಟು 168 ಅಂಕ ಕಲೆಹಾಕುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಈ ಗೌರವ ಪಡೆಯಿತು.ಬಾಲಕರ ವಿಭಾಗದಲ್ಲಿ ತಲಾ 8 ಅಂಕಗಳನ್ನು ಗಳಿಸಿದ ಬೆಂಗಳೂರಿನ ಕೆ.ರಘು, ದಕ್ಷಿಣ ಕನ್ನಡದ ಸಿದ್ದಾರ್ಥ ಮೋಹನನಾಯ್ಕ, ಜಿ.ಗೌತಮ್ ಮತ್ತು ಮೈಸೂರಿನ ನಂದೀಶ ಕುಮಾರ್ ವೈಯಕ್ತಿಕ ಪ್ರಶಸ್ತಿ ಹಂಚಿಕೊಂಡರು. ಬಾಲಕಿಯರ ವಿಭಾಗದಲ್ಲಿ ತಲಾ 15 ಅಂಕಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಕೆ.ಸುಪ್ರಿತಾ ಮತ್ತು ವರ್ಷಾ ವೈಯಕ್ತಿಕ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದರು.ಕೊನೆ ದಿನದ ಫಲಿತಾಂಶ:

ಬಾಲಕರ ವಿಭಾಗ ಗುಡ್ಡಗಾಡು ಓಟ (5 ಕಿ.ಮೀ) : ಪರಸಪ್ಪ (ವಿಜಾಪುರ, ಕಾಲ: 16.01 ನಿ.) -1, ಅಮರೀಶ ಹುಬ್ಬಳ್ಳಿ (ಬಾಗಲಕೋಟೆ)-2, ಮಹೇಶಕುಮಾರ್ (ಮಂಗಳೂರು)-3, ಆನಂದ (ಬೆಳಗಾವಿ)-4, ಆರ್.ಸಿದ್ದು (ಬಾಗಲಕೋಟೆ) -5400 ಮೀ. ಓಟ: ಅಕ್ಷಯ (ಬೆಳಗಾವಿ, 50.3 ಸೆ.)-1, ರಘು (ಬೆಂಗಳೂರು ದ.)-2, ಶರತ್-3ಉದ್ದ ಜಿಗಿತ: ಸಿದ್ಧಾರ್ಥ ಮೋಹನನಾಯ್ಕ (ಮಂಗಳೂರು, 7.02 ಮೀ. )-1, ಸೂರಜ್ (ಬೆಂಗಳೂರು)-2, ಕಿರಣ್ (ಧಾರವಾಡ)-34/100 ಮೀ ರಿಲೆ: ಧಾರವಾಡ (ಕುಮಾರ್, ಫಕೀರಪ್ಪ, ಕಾರ್ತಿಕ್, ಪವನ್)-1, ಬೆಂಗಳೂರು-ದ (ಸಲೀಂ ಶೇಖ್, ಸೂರಜ್, ಶಿವಕುಮಾರ್, ಮೋಹಿದಕುಮಾರ್)-2, ಮಂಗಳೂರು (ರೊಲಾನ್ಸ್ ಪೆರಾರ, ರೇಯನ್, ವಿಕ್ರಮ್, ಗೌರೀಶ್ )-34/400 ಮೀ. ರಿಲೆ:  ಮಂಗಳೂರು (ಸತೀಶ್, ರಾಹುಲ್, ಅಹಮ್ಮದ್, ಸತೀಶ್ ಕುಮಾರ, ಕಾಲ: 3.28.06 ನಿ.)-1, ಧಾರವಾಡ-2, ಬೆಂಗಳೂರು ದಕ್ಷಿಣ-3.ಬಾಲಕಿಯರ ವಿಭಾಗ: ಗುಡ್ಡಗಾಡು ಓಟ (3 ಕಿ.ಮೀ) : ಬಿ.ಕೆ. ಸುಪ್ರಿತಾ (ಮಂಗಳೂರು, 11.25 ನಿ)-, ಶ್ರೇಯಾ (ಮಂಗಳೂರು)-2, ಸೌಮ್ಯ (ಮಂಗಳೂರು)-3, ಪೂರ್ಣಿಮಾ (ಮೈಸೂರು)-4, ಅಶ್ವಿತಾ (ಮಂಗಳೂರು)-5

4/400 ಮೀ ರಿಲೆ: ಮಂಗಳೂರು (ಮಾನಸ, ಲಿಖಿತ, ಶ್ರೀಲತಾ, ಉಮಾಭಾಗ್ಯಲಕ್ಷ್ಮಿ, ಕಾಲ: 4.10.06 ನಿ)-1, ಕೊಡಗು (ಶಿಲ್ಪಾ, ಮಧುರಾ, ದೇವಿಶ್ರೀ, ಕಾವ್ಯಾ)-2400 ಮೀ ಓಟ: ವರ್ಷಾ (ಮಂಗಳೂರು, 59.1 ಸೆ)-1, ಮೇಘಾ (ಮಂಗಳೂರು)-2, ಪ್ರಿಯಾಂಕಾ (ಮೈಸೂರು)-3

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry