ಶುಕ್ರವಾರ, ಮೇ 7, 2021
26 °C

ಅಥ್ಲೆಟಿಕ್ಸ್: ಪೂವಮ್ಮಗೆ ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟಿಯಾಲ (ಪಿಟಿಐ): ಒಎನ್‌ಜಿಸಿ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಎಂ.ಆರ್.ಪೂವಮ್ಮ ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.ಕೂಟದ ಎರಡನೇ ದಿನವಾದ ಭಾನುವಾರ ಪೂವಮ್ಮ ಈ ದೂರವನ್ನು 53. 70 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಆದರೆ ಒಲಿಂಪಿಕ್ಸ್‌ನ `ಬಿ~ ದರ್ಜೆ (52.30 ಸೆ.)ಯ ಮಟ್ಟ ತಲುಪಲು ಅವರಿಗೆ ಸಾಧ್ಯವಾಗಲಿಲ್ಲ.ಪುರುಷರ ವಿಭಾಗದ 400 ಮೀ.ನಲ್ಲಿ ಪಿ.ಪಿ.ಕುನ್ಹು ಮೊಹಮ್ಮದ್ (46.67 ಸೆ.) ಮೊದಲ ಸ್ಥಾನ ಗಳಿಸಿದರು. ಪುರುಷರ ವಿಭಾಗದ ಹೈಜಂಪ್‌ನಲ್ಲಿ ರಾಜ್ಯದ ಬಿ.ಚೇತನ್ ಎರಡನೇ ಸ್ಥಾನ ಪಡೆದರು. ಅವರು 2.05 ಮೀ. ಎತ್ತರ ಜಿಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.