ಅಥ್ಲೆಟಿಕ್ಸ್: ಪ್ರೇಮ್‌ಕುಮಾರ್‌ಗೆ ಕಂಚು

7

ಅಥ್ಲೆಟಿಕ್ಸ್: ಪ್ರೇಮ್‌ಕುಮಾರ್‌ಗೆ ಕಂಚು

Published:
Updated:

ನವದೆಹಲಿ (ಪಿಟಿಐ): ಭಾರತದ  ಕುಮಾರವೇಲು ಪ್ರೇಮ್‌ಕುಮಾರ್ ಚೀನಾದಲ್ಲಿ ಆರಂಭವಾದ  ಐದನೇ ಒಳಾಂಗಣ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.ಶನಿವಾರ ಆರಂಭವಾದ ಈ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷದ ಈ ಅಥ್ಲೀಟ್ 7.62ಮೀಟರ್ ದೂರ ಜಿಗಿಯುವ ಮೂಲಕ ಕಂಚು ತಮ್ಮದಾಗಿಸಿಕೊಂಡರು.ಈ ಮೂಲಕ ಭಾರತದ ಅಥ್ಲೀಟ್ ನಿರ್ಮಿಸಿದ್ದ ದಾಖಲೆಯನ್ನು ಉತ್ತಮ ಪಡಿಸಿದರು. ಏಳು ವರ್ಷಗಳ ಹಿಂದೆ ಪಟ್ಟಾಯಾದಲ್ಲಿ ನಡೆದ ಕೂಟದಲ್ಲಿ ಭಾರತದ ಮಹಾ ಸಿಂಗ್ 7.49 ಮೀ. ದೂರ ಜಿಗಿದಿದ್ದರು.1500 ಮೀ. ಓಟದ ಸ್ಪರ್ಧೆಯಲ್ಲಿ ಕಾರಿಯಪ್ಪ ರಂಜನ್ ನಾಲ್ಕನೇ ಸ್ಥಾನ ( 4:00.03ಸೆಕೆಂಡ್) ಪಡೆದರು. ಕೇವಲ 0.2ಸೆಕೆಂಡ್‌ಗಳ ಅಂತರದಲ್ಲಿ ಕಂಚಿನ ಪದಕ ಜಯಿಸುವ ಅವಕಾಶ ತಪ್ಪಿಸಿಕೊಂಡರು.ಹೈಜಂಪ್‌ನಲ್ಲಿ ಸಹನಾ ಕುಮಾರಿ ನಾಲ್ಕನೇ ಸ್ಥಾನ ಪಡೆದರು. ಈ ಸ್ಫರ್ಧಿ 1.80ಮೀ ಎತ್ತರ ಜಿಗಿದರು. ಚೀನಾದ ಜೇಂಗ್ ಕ್ಸಿಂಗ್ (1.92ಮೀ) ಚಿನ್ನ ಜಯಿಸಿದರು. ಪಿ.ಜೆ. ವಿನೋದ್ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry