ಅಥ್ಲೆಟಿಕ್ಸ್: ಬಂಗಾರ ಗೆದ್ದ ಸಂಜಯ್, ಶಾಲಿನಿ

ಶನಿವಾರ, ಮೇ 25, 2019
33 °C

ಅಥ್ಲೆಟಿಕ್ಸ್: ಬಂಗಾರ ಗೆದ್ದ ಸಂಜಯ್, ಶಾಲಿನಿ

Published:
Updated:

ಬೆಂಗಳೂರು: ವಿ. ಸಂಜಯ್ ಹಾಗೂ ಶಾಲಿನಿ  ನಾಯ್ಕ ಇಲ್ಲಿ ಮುಕ್ತಾಯಗೊಂಡ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 100 ಮೀ. ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಸ್ಪರ್ಧೆಯಲ್ಲಿ ಅಲ್ ಅಮೀನ್ ಕಾಲೇಜಿನ ವಿ. ಸಂಜಯ್ ನಿಗದಿತ ಅಂತರವನ್ನು 10.7ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಬಿಎಂಎಸ್ ಕಾಲೇಜಿನ ಶಾಲಿನಿ 12.7ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.ಶನಿವಾರ ಚಿನ್ನದ ಪದಕ ಜಯಿಸಿದರು: ಪುರುಷರ ವಿಭಾಗ: 100ಮೀ ಓಟ: ವಿ. ಸಂಜೀವ್ (ಆಲ್ ಅಮೀನ್ ಕಾಲೇಜ್, ಕಾಲ: 10.7ಸೆ); 400ಮೀ ಹರ್ಡಲ್ಸ್: ಎಸ್.ಎಂ. ರೋಷನ್ (ನೋಬಲ್ ಸ್ಕೂಲ್ ಆಫ್ ಬಿಸಿನೆಸ್, ಕಾಲ: 58.30ಸೆ.); ಪೋಲ್ ವಾಲ್ಟ್: ಗಣೇಶ್ ಪ್ರಸಾದ್ (ಜಿಎಫ್‌ಜಿಸಿ ಎಚ್‌ಎಸ್‌ಆರ್ ಲೇ ಔಟ್ ಎತ್ತರ: 2:80); 4ಷ100ಮೀ. ರಿಲೇ: ಆಲ್ ಅಮಿನ್ ಕಾಲೇಜ್ (ಕಾಲ: 44.7ಸೆ.), ಡೆಕಥ್ಲಾನ್: ವಿ. ಶಾಂತ ಕುಮಾರ್ (ಜಿಎಫ್‌ಜಿಸಿ, ಕೆ.ಆರ್. ಪುರಂ, ಪಾಯಿಂಟ್ಸ್: 3320); 20ಕಿ.ಮೀ. ನಡಿಗೆ: ಎಸ್. ಸೂರನ್ (ಜಿಎಫ್‌ಜಿಸಿ ಮುಲ್ಬಗಲ್, ಕಾಲ: 2:13.48ಸೆ.); ಹಾಫ್ ಮ್ಯಾರಥಾನ್: ಎಸ್. ಸುಧೀರ್ ಶರ್ಮ (ಸೂರನ್ ಕಾಲೇಜ್, ಕಾಲ:1:22.24ಸೆ.).ಮಹಿಳೆಯರ ವಿಭಾಗ: 100ಮೀ ಓಟ: ಶಾಲಿನಿ (ಬಿಎಂಎಸ್ ಕಾಲೇಜ್, ಕಾಲ: 12.7ಸೆ); ಟ್ರಿಪಲ್ ಜಂಪ್: ಬಿ.ಬಿ. ಶುಭಾ (ಸೆಂಟ್ರಲ್ ಕಾಲೇಜ್; 11.72), ಹೈಜಂಪ್: ಎಸ್. ಸ್ನೇಹಾ (ಎಂಎಲ್‌ಎ ಕಾಲೇಜ್, ಎತ್ತರ:1.27ಮೀ.); ಡಿಸ್ಕಸ್ ಥ್ರೋ: ಸಾಧನಾ ಬಾಸ್ಕರ್ (ಮೌಂಟ್ ಕಾರ್ಮೆಲ್, ದೂರ: 27.15); 4ಷ100ಮೀ. ರಿಲೇ: ಮೌಂಟ್ ಕಾರ್ಮೆಲ್ ಕಾಲೇಜ್ (ಕಾಲ: 58.1); ಹೆಪ್ಟಥ್ಲಾನ್: ಜಿ.ಎಂ. ಐಶ್ವರ್ಯ (ಮೌಂಟ್ ಕಾರ್ಮೆಲ್ ಕಾಲೇಜ್, 4355ಪಾಯಿಂಟ್ಸ್).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry