ಶುಕ್ರವಾರ, ಮೇ 7, 2021
23 °C

ಅಥ್ಲೆಟಿಕ್ಸ್: ಮಯೂಖಾಗೆ ಎರಡನೇ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಮಯೂಖಾ ಜಾನಿ ಇಲ್ಲಿ ನಡೆಯುತ್ತಿರುವ 51ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಎರಡನೇ ಚಿನ್ನದ ಪದಕ ಗೆದ್ದುಕೊಂಡರು.ಸೋಮವಾರ ನಡೆದ ಮಹಿಳೆಯರ ಟ್ರಿಪ್‌ಲ್ ಜಂಪ್ ಸ್ಪರ್ಧೆಯಲ್ಲಿ ಮಯೂಖಾ 13.71 ಮೀ. ದೂರ ಜಿಗಿದು ನೂತನ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು. ಈ ಹಿಂದಿನ ದಾಖಲೆಯೂ (13.54 ಮೀ.) ಮಯೂಖಾ ಹೆಸರಿನಲ್ಲೇ ಇತ್ತು. ಒಎನ್‌ಜಿಸಿಯನ್ನು ಪ್ರತಿನಿಧಿಸುತ್ತಿರುವ ಕೇರಳದ ಸ್ಪರ್ಧಿ ಲಾಂಗ್ ಜಂಪ್‌ನಲ್ಲೂ ಚಿನ್ನ ಗೆದ್ದಿದ್ದರು.ಸಾಕಷ್ಟು ಸ್ಪರ್ಧಿಗಳು ಇಲ್ಲದ ಕಾರಣ ಮಹಿಳೆಯರ 3,000 ಮೀ. ಸ್ಟೀಪ್‌ಲ್ ಚೇಸ್ ಸ್ಪರ್ಧೆಯ ಫೈನಲ್‌ನ್ನು ಸಂಘಟಕರು ರದ್ದುಗೊಳಿಸಿದ ಘಟನೆಯೂ ಸೋಮವಾರ ನಡೆಯಿತು. ಇದರಿಂದಾಗಿ ಸುಧಾ ಸಿಂಗ್ ನಿರಾಸೆ ಅನುಭವಿಸಿದರು. ರೈಲ್ವೇನ ಸುಧಾ ಇಲ್ಲಿ ಉತ್ತಮ ಪ್ರದರ್ಶನ ನೀಡಿ ಲಂಡನ್ ಒಲಿಂಪಿಕ್‌ಗೆ ಅರ್ಹತೆ ಪಡೆಯುವ ವಿಶ್ವಾಸ ಹೊಂದಿದ್ದರು. ಆದರೆ ಸ್ಪರ್ಧೆಯನ್ನೇ ರದ್ದುಗೊಳಿಸಿದ್ದು ಅವರಿಗೆ ನಿರಾಸೆ ಉಂಟುಮಾಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.