ಅಥ್ಲೆಟಿಕ್ಸ್: ರಾಷ್ಟ್ರಮಟ್ಟಕ್ಕೆ ಪವಿತ್ರಾ ಆಯ್ಕೆ

7

ಅಥ್ಲೆಟಿಕ್ಸ್: ರಾಷ್ಟ್ರಮಟ್ಟಕ್ಕೆ ಪವಿತ್ರಾ ಆಯ್ಕೆ

Published:
Updated:

ಗುಳೇದಗುಡ್ಡ: ಬೆಂಗಳೂರಿನ ಕಂಠಿರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಅಂಗವಿಕಲ ಶಾಲಾ ಮಕ್ಕಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿ ಪವಿತ್ರಾ ನಿಲುಗಲ್  ಉತ್ತಮ ಸಾಧನೆ ತೋರಿದ್ದಾರೆ.ಜಾವೆಲಿನ್ ಎಸೆತದಲ್ಲಿ (ಪ್ರಥಮ) ಹಾಗೂ ಗುಂಡು ಎಸೆತದಲ್ಲಿ (ದ್ವಿತೀಯ) ಬಹುಮಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ ಎಂದು ಉಪ ಪ್ರಾಚಾರ್ಯ ಮನೋಹರ  ಚಲವಾದಿ ತಿಳಿಸಿದ್ದಾರೆ.ತೋಗುಣಸಿ:ಸಾಮೂಹಿಕ ವಿವಾಹ 17ರಂದುಗುಳೇದಗುಡ್ಡ  ಸಮೀಪದ ತೋಗುಣಸಿ ಗ್ರಾಮದಲ್ಲಿ  ವಿಶ್ವಾರಾಧ್ಯರ ಜಯಂತಿ ಹಾಗೂ ರಥೋತ್ಸವದ ಅಂಗವಾಗಿ ಫೆ.  17ರಂದು ಉಚಿತ ಸಾಮೂಹಿಕ ವಿವಾಹ ಸಮಾರಂಭ ಅಮರೇಶ್ವರ ಮಠದಲ್ಲಿ ನಡೆಯಲಿದೆ.ಆಸಕ್ತ ವಧು-ವರರು ಅಧಿಕೃತ ದಾಖಲೆಗಳೊಂದೊಗೆ ಬಾದಾಮಿ ತಾಲ್ಲೂಕಿನ ತೋಗುಣಸಿಯ ಅಮರೇಶ್ವರ ಮಠದಲ್ಲಿ  ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಉಪನ್ಯಾಸ:  ಗುಳೇದಗುಡ್ಡದ ಭಂಡಾರಿ ಹಾಗೂ ರಾಠಿ ಪದವಿ ಪೂರ್ವ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ಏಡ್ಸ್ ಮತ್ತು ಯುವಜತೆ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಮಾಲೋಚಕಿ ಜ್ಯೋತಿ ಮೆಣಸಿನಕಾಯಿ ಮಾತನಾಡಿದರು.  ಅತಿಥಿಗಳಾಗಿ ಗೊಳಸಂಗಿ ಕಾಲೇಜಿನ ಪ್ರಾಧ್ಯಾಪಕ ಸಿ.ಎಂ. ಜೋಶಿ ಆಗಮಿಸಿದ್ದರು. ಪ್ರಾಚಾರ್ಯ ಪ್ರಕಾಶ ನರಗುಂದ ಅಧ್ಯಕ್ಷತೆ ವಹಿಸಿದ್ದರು.ಬಸವರಾಜ ಯಂಡಿಗೇರಿ, ಎಸ್.ಎಸ್. ಶಿರ್ಸಿ, ವೈ.ಪಿ. ಗಾಜಿಯವರ, ವಾಸು ಬೆಕಿನಾಳ, ಸುರೇಶ ಜುಟ್ಟಲಮಡ್ಡಿ  ಮೊದಲಾದವರು ಉಪಸ್ಥಿತರಿದ್ದರು.  ಎಂ.ಎಲ್. ಉಗಲವಾಟ ಸ್ವಾಗತಿಸಿದರು. ಎ.ಬಿ. ಜನಾಲಿ ನಿರೂಪಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry