ಭಾನುವಾರ, ಮೇ 9, 2021
27 °C

ಅಥ್ಲೆಟಿಕ್ಸ್: ಸಿನಿಗೆ ಬೆಳ್ಳಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕರ್ನಾಟಕದ ಸಿನಿ.ಎ.ಮಾರ್ಕೊಸ್ ಇಲ್ಲಿ ಮುಕ್ತಾಯವಾದ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ 1500ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡರು.ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಸಿನಿ ನಾಲ್ಕು ನಿಮಿಷ 17.53 ಸಕೆಂಡ್‌ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ನಾಲ್ಕು ನಿಮಿಷ 16.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಪುಣೆಯ ಒ.ಪಿ. ಜೈಷಾ ಚಿನ್ನ ಗೆದ್ದುಕೊಂಡರು.ಅರ್ಹತೆ: ತಮಿಳುನಾಡಿನ ರೆಂಜಿತ್ ಮಹೇಶ್ವರಿ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ (16.98ಮೀ.) ಚಿನ್ನ ಜಯಿಸುವ ಮೂಲಕ ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡರು. ಈ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದ ಎರಡನೇ ಅಥ್ಲೀಟ್ ಎನಿಸಿದರು.ಗುರುವಾರ ಸುಧಾ ಸಿಂಗ್ ಅರ್ಹತೆ ಗಿಟ್ಟಿಸಿದ್ದರು. ರೆಂಜಿತ್ (ಪುರುಷರ ವಿಭಾಗ) ಮತ್ತು ಸುಧಾ (ಮಹಿಳಾ ವಿಭಾಗ) ಅವರು `ಅತ್ಯುತ್ತಮ ಅಥ್ಲೀಟ್' ಗೌರವ ಪಡೆದರು.ಒಟ್ಟು 172.5 ಪಾಯಿಂಟ್‌ಗಳನ್ನು ಕಲೆ ಹಾಕಿದ ಕೇರಳ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ತಮಿಳುನಾಡು 147.5 ಪಾಯಿಂಟ್‌ಗಳನ್ನು ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.