ಅದಮ್ಯಚೇತನದ ಸಾಮಾಜಿಕ ಕಳಕಳಿ ಕೆಲಸ: ಕವಿ ಸಿದ್ದಲಿಂಗಯ್ಯ ಶ್ಲಾಘನೆ

7

ಅದಮ್ಯಚೇತನದ ಸಾಮಾಜಿಕ ಕಳಕಳಿ ಕೆಲಸ: ಕವಿ ಸಿದ್ದಲಿಂಗಯ್ಯ ಶ್ಲಾಘನೆ

Published:
Updated:

ಬೆಂಗಳೂರು: ‘ಅದಮ್ಯಚೇತನ ಸಂಸ್ಥೆಯು ದೊಡ್ಡ ಪ್ರಮಾಣದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಮೂಲಕ  ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದೆ’ ಎಂದು ಕವಿ ಸಿದ್ದಲಿಂಗಯ್ಯ ಶ್ಲಾಘಿಸಿದರು.ನಗರದಲ್ಲಿ ಬುಧವಾರ  ಏರ್ಪಡಿಸಿದ್ದ ಅದಮ್ಯ ಚೇತನ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ‘ಅನಂತಕುಮಾರ್‌ ಅವರು ಕೇಂದ್ರ ಸಚಿವರಾಗಿದ್ದ ವೇಳೆ ಕನ್ನಡದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷನಾಗಿದ್ದಾಗ ಕಲಾವಿದರಿಗೆ ನೆರವು ನೀಡಲು ಕೇಂದ್ರ ಸರ್ಕಾರದ ಇಲಾಖೆಯ ಶಾಖೆಯನ್ನು ನಗರದಲ್ಲಿ ಆರಂಭಿಸಲು ಬೇಕಾದ ವ್ಯವಸ್ಥೆ ಮಾಡಿದ್ದರು. ಅದು ಸದ್ಯದಲ್ಲಿಯೇ ನೆರವೇರುವ ನಿರೀಕ್ಷೆ ಇದೆ’ ಎಂದು ಸ್ಮರಿಸಿದರು.ಶಾಸಕ ಆರ್.ಅಶೋಕ, ಮಾಜಿ ಸಚಿವ ವಿ.ಸೋಮಣ್ಣ,  ಸಂಗೀತ ನಿರ್ದೇಶಕ ಹಂಸಲೇಖ, ನಟ ಗಣೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry