ಸೋಮವಾರ, ಜನವರಿ 27, 2020
20 °C

ಅದಿರು ಕಳ್ಳಸಾಗಣೆ ಪ್ರಕರಣ: ಸಿಬಿಐನಿಂದ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಎಬ್‌.ಬಿ ಲಾಜಿಸ್ಟಿಕ್ಸ್‌ನ ಕೆ.ಜನಾರ್ದನ ರೆಡ್ಡಿ, ಈಗಲ್‌ ಟ್ರೇಡರ್ಸ್‌ನ ಕುರುಬ ನಾಗರಾಜ್‌ ಮತ್ತು ಹೊಸಕೋಟೆ ಶಾಸಕ ಆನಂದ್‌ ಸಿಂಗ್ ಸಂಬಂಧಿ ಪ್ರವೀಣ್‌ ಸಿಂಗ್‌ ಬಂಧಿತರು.ಕಾರವಾರ ಶಾಸಕ ಸತೀಶ ಸೈಲ್‌ ಒಡೆತನದ ಶ್ರೀಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪೆನಿಗೆ ಅಕ್ರಮವಾಗಿ ಅದಿರು ಪೂರೈಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾ­ಗಿದೆ. ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸ­ಲಾಯಿತು. ಆರೋಪಿಗಳನ್ನು ಎರಡು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲಾಗಿದೆ.

ಪ್ರತಿಕ್ರಿಯಿಸಿ (+)