ಅದಿರು ನಾಪತ್ತೆ ಮುಖ್ಯ ಕಾರ್ಯದರ್ಶಿಗೆಸಿಇಸಿ ಪತ್ರ

7

ಅದಿರು ನಾಪತ್ತೆ ಮುಖ್ಯ ಕಾರ್ಯದರ್ಶಿಗೆಸಿಇಸಿ ಪತ್ರ

Published:
Updated:

ಬೆಂಗಳೂರು: ಕಾರವಾರ ಸಮೀಪದ ಬೇಲೆಕೇರಿ ಬಂದರಿನಲ್ಲಿದ್ದ ಕಬ್ಬಿಣದ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ), ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.  ಮೂರು ಪುಟಗಳ ಪತ್ರ ಗುರುವಾರ ಸರ್ಕಾರದ ಕೈಸೇರಿದೆ. ಬೇಲೆಕೇರಿ ಬಂದರಿನಲ್ಲಿ ಎಷ್ಟು ಪ್ರಮಾಣದ ಅದಿರು ಇತ್ತು? ಅದು ಎಲ್ಲಿಂದ ಬಂದಿತ್ತು? ವಶಕ್ಕೆ ತೆಗೆದುಕೊಂಡಿದ್ದ ಅದಿರನ್ನು ಯಾವ ಪರ್ಮಿಟ್ ಮೇಲೆ ಸರಬರಾಜು ಮಾಡಲಾಗಿದೆ? ಅದಕ್ಕೆ ರಾಜಧನ ಪಾವತಿಸಲಾಗಿತ್ತೇ ಎಂಬ ಅಂಶಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.ಲೋಕಾಯುಕ್ತ ಪೊಲೀಸರ ತನಿಖೆ, ನಂತರ ಅದನ್ನು ಸಿಐಡಿ ತನಿಖೆಗೆ ವಹಿಸಿದ್ದರ ಬಗ್ಗೆಯೂ ಮಾಹಿತಿ ಕೇಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry