ಅದಿ-ಅನಂತ್ ಸಂಗೀತ ಹಬ್ಬ

7

ಅದಿ-ಅನಂತ್ ಸಂಗೀತ ಹಬ್ಬ

Published:
Updated:

ಕಲೆ ಮತ್ತು ಸಂಸ್ಕೃತಿ ಸಂಸ್ಥೆ  `ಪ್ರದರ್ಶಕ ಕಲೆಗಳ ರಾಷ್ಟ್ರೀಯ ಕೇಂದ್ರ~ (ಎನ್‌ಸಿಪಿಎ) ಆಯೋಜಿಸಿದ್ದ `ಸಿಟಿ-ಎನ್‌ಸಿಪಿಎ ಆದಿ ಅನಂತ್: ಇಲ್ಲಿಂದ ಅನಂತದೆಡೆಗೆ~ ಕಾರ್ಯಕ್ರಮ ಚೌಡಯ್ಯ ಮೆಮೊರಿಯಲ್ ಸಭಾಂಗಣದಲ್ಲಿ ನಡೆಯಿತು. ಭಾರತೀಯ ಸಂಗೀತದ ಸೃಜನಾತ್ಮಕ ಪ್ರೇಕ್ಷಕರನ್ನು ಸೆಳೆಯಬೇಕೆಂಬ ಉದ್ದೇಶದಿಂದ ಮುಂಬೈ, ದೆಹಲಿ ಹಾಗೂ ಬೆಂಗಳೂರು ನಗರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಪರಂಪರೆಯ ನೆಲೆಯಲ್ಲಿ ಆಳವಾಗಿ ತೊಡಗಿಕೊಂಡೂ, ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಹೊಳಹನ್ನು ಒಳಗೊಳ್ಳುವ ಮೂಲಕ, ಸಿಟಿ-ಎನ್‌ಸಿಪಿಎ ಆದಿ ಅನಂತ್ ಭಾರತೀಯ ಸಂಗೀತ ಉತ್ಸವ ಕಲಾವಿದರ ಪರಂಪರೆಯು ಮರುವ್ಯಾಖ್ಯಾನಗೊಳ್ಳುವುದನ್ನು ದಾಖಲಿಸಿತು.ಚೌಡಯ್ಯ ಹಾಲ್‌ನಲ್ಲಿ ಕೌಶಿಕಿ ಚಕ್ರವರ್ತಿ ದೇಸಿಕನ್ ಅವರ ಗಾಯನ ಮನರಂಜಿಸಿತು. ಬಳಿಕ ನಡೆದ ತಾಳವಾದ್ಯ ಕಛೇರಿಯಲ್ಲಿ ಅನಿಂದೊ ಚರ್ಟಿ (ತಬಲಾ), ಕಾರೈಕುಡಿ ಮಣಿ (ಮೃದಂಗ), ವಿ.ಸುರೇಶ್ (ಘಟಂ) ಮತ್ತು ಎನ್.ಅಮತ್ (ಖಂಜೀರಾ)ದಲ್ಲಿ ಸಹಕರಿಸಿದರು.ಎನ್‌ಸಿಪಿಎ ಮುಖ್ಯಸ್ಥ ಖುಶ್ರೂ ಎನ್. ಸುಂಟೂಕ್ ಮಾತನಾಡಿ, `ನಮ್ಮ ಸಂಗೀತ ಪೀಳಿಗೆಗೆ ಹೊಸ ಸಂದೇಶವೊಂದನ್ನು ಕೊಡಬಯಸುವ ಮೂಲಕ ಜನವರಿ ನಮಗೆ ವಿಶೇಷ ತಿಂಗಳಾಗಿದೆ. `ಸಿಟಿ-ಎನ್‌ಸಿಪಿಎ ಆದಿ ಅನಂತ್: ಇಲ್ಲಿಂದ ಅನಂತದೆಡೆಗೆ~ ಸಿಟಿ ಇಂಡಿಯಾದ ಜತೆಗೆ ಹೊಸ ಪಾಲುದಾರಿಕೆಯ ಮೂಲಕ ಈ ಪ್ರಯತ್ನವನ್ನು ಮುಂದುವರಿಸಲಿದೆ.

 

ಸಂಪ್ರದಾಯದ ಜತೆಗೆ ಹೊಸ ಸೃಜನಶೀಲತೆಯನ್ನೂ ಒಳಗೊಳ್ಳಲು ಉತ್ಸವ ಪ್ರಯತ್ನಿಸುತ್ತಿದೆ. ಎಲ್ಲ ಮೂರು ನಗರಗಳಲ್ಲೂ ನಾವು ಅತ್ಯಂತ ಅನುಪಮ ಸಂಗೀತಗಾರರ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಿದ್ದೇವೆ~ ಎಂದರು.ಎನ್‌ಸಿಪಿಎ ಭಾರತೀಯ ಸಂಗೀತ ಕಾರ್ಯಕ್ರಮದ ವಿಭಾಗ ಮುಖ್ಯಸ್ಥೆ ಡಾ. ಸುವರ್ಣ ಲತಾ ರಾವ್, `ಈ ಹೊಸ ತತ್ವವನ್ನು ರೂಪಿಸಲು ನಮಗೆ ಸಾಕಷ್ಟು ಸಮಯ ತಗುಲಿದೆ. ಒಂದು ಆವೃತ್ತಿ ಬಳಿಕ ಮುಗಿದು ಹೋಗದ, ಸ್ಥಿರತೆಯನ್ನು ಕಾಯ್ದುಕೊಳ್ಳುವ ತಾತ್ವಿಕತೆ ನಮಗೆ ಬೇಕಾಗಿದೆ. ಅದರಂತೆ ಮುಂದುವರೆಸಿಕೊಂಡು ಹೋಗುವ ಇರಾದೆಯೂ ನಮಗಿದೆ~ ಎಂದು ಹೇಳಿದರು.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry