ಸೋಮವಾರ, ಡಿಸೆಂಬರ್ 16, 2019
17 °C

ಅದೃಷ್ಟದ ಕದದ ಎದುರು ಸಂಜನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದೃಷ್ಟದ ಕದದ ಎದುರು ಸಂಜನಾ

`ಪಂಚರಂಗಿ

ನಾನು ಸುಲಭವಾಗಿ ಬಿಕಿನಿ ತೊಡುವವಳಲ್ಲ, ಸೌಂದರ್ಯ ಪ್ರಜ್ಞೆ ತೋರಲು ಅನಿವಾರ್ಯವಾದರೆ ಮಾತ್ರ ಇದಕ್ಕೆ ಒಪ್ಪಿಕೊಳ್ಳುವೆ...~

ಈ ಬಾರಿ ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ಕ್ಯಾಲೆಂಡರ್‌ನಲ್ಲಿ ನಿಮ್ಮ ಚಿತ್ರ ಕಾಣುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ನಟಿ ಸಂಜನಾ ನೀಡಿದ ಉತ್ತರವಿದು.`ಬಿಕಿನಿ ತೊಡುವ ಬಗ್ಗೆ ವಿನಾಕಾರಣ ವಿವಾದ ಹುಟ್ಟುಹಾಕುತ್ತಾರೆ, ಈ ಬಗ್ಗೆ ನನ್ನ ಅಸಮ್ಮತಿ ಇಲ್ಲ, ಆದರೆ ಆ ಚಿತ್ರ ದುರ್ಬಳಕೆ ಆಗಬಾರದು ಅಷ್ಟೆ. ಕೋ...ಕೋ...ಚಿತ್ರದಲ್ಲಿ `ಲಾಬಾ ಲಾಬಾ~ ಹಾಡಿಗೆ ಸಾಕಷ್ಟು ಕಾಮೆಂಟ್ಸ್ ಬಂದಿದ್ದವು. `ಚಿಕ್ನಿ ಚಮೇಲಿ~ ಹಾಡಿಗೆ ನರ್ತಿಸಲು ನನಗೂ ಇಷ್ಟವಿದೆ... ಸಿಸಿಎಲ್ ಪಂದ್ಯಗಳಿಗೆ ಅಂಬಾಸಿಡರ್ ಆಗಿ ನೇಮಿಸಲು ನನ್ನನ್ನು ಸಂಪರ್ಕಿಸಿದ್ದರು. ಆಗ ನಾನು ಸಿಂಗಾಪುರ್‌ನಲ್ಲಿ ಶೂಟಿಂಗ್ ಕಾರ್ಯದಲ್ಲಿ ನಿರತಳಾಗಿದ್ದೆ~ ಎಂಬುದು ಅವರ ಸ್ಪಷ್ಟನೆ.ಈ ವರ್ಷ ನಟಿ ಸಂಜನಾಗೆ ಅದೃಷ್ಟದ ಕದ ತೆರೆದಿದೆ. ಈಗಷ್ಟೇ ತೆರೆಕಂಡಿರುವ ಮಲಯಾಳಿ ಚಿತ್ರ `ಕಾಸನೋವ~ದಲ್ಲಿ ಸಾಲ್ಸಾ ನೃತ್ಯಗಾರ್ತಿಯಾಗಿ ಮೋಹನ್ ಲಾಲ್ ಅವರೊಂದಿಗೆ ನಟಿಸಿರುವ ಚಿತ್ರ ಕಳೆದ ಗುರುವಾರವಷ್ಟೇ ತೆರೆಕಂಡಿದೆ.`ಸಾಲ್ಸಾ ನೃತ್ಯದ ಬಗ್ಗೆ ನನಗೆ ಮೊದಲೇ ಸ್ಪಲ್ಪ ತಿಳಿದಿದ್ದಿದ್ದು ಇಲ್ಲಿ ನೆರವಿಗೆ ಬಂತು. ಆದರೆ ಲಾಲ್ ಅವರೊಡನೆ ನಟಿಸುವ ಮೊದಲೇ ಉದ್ವೇಗಕ್ಕೊಳಗಾಗಿ ಸಂಪೂರ್ಣ ಬೆವೆತಿದ್ದೆ. ಹಿರಿಯ ನಟ ಎಂಬ ಹಮ್ಮಿಲ್ಲದೆ ಶೂಟಿಂಗ್ ಸಮಯದಲ್ಲಿ ಅವರು ಸಾಕಷ್ಟು ವಿಷಯಗಳನ್ನು ಹೇಳಿಕೊಡುತ್ತಿದ್ದರು. ಆ ಅನುಭವವೂ ಅದ್ಭುತ~ ಎಂದು ಬಣ್ಣಿಸುತ್ತಾರೆ ಸಂಜನಾ.ನನ್ನ ಮುಂದೆ ಸಾಕಷ್ಟು ಚಿತ್ರಗಳಿರುವುದರಿಂದ ಚಿತ್ರರಂಗದ ಭವಿಷ್ಯದ ಬಗ್ಗೆ ಯಾವುದೇ ಭಯವಿಲ್ಲ ಎನ್ನುವ ಈಕೆಯ ಕೈಯಲ್ಲಿ ಕನ್ನಡದ ನಾಲ್ಕು ಪ್ರಮುಖ ಚಿತ್ರಗಳಿವೆ. ಅದರೊಂದಿಗೆ ತನ್ನ ಹೆಸರಿನಲ್ಲಿ ಮೊಬೈಲ್ ಆಪ್ (ಅಪ್ಲಿಕೇಶನ್) ಹೊಂದಿರುವ ಮೊದಲ ಕನ್ನಡದ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರಿಂದ ಮೊಬೈಲ್‌ನಲ್ಲೇ ನಟಿ ಸಂಜನಾ ಅವರ ಚಿತ್ರಗಳ ಮಾಹಿತಿ, ಇತ್ತೀಚಿನ ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. 

ಪ್ರತಿಕ್ರಿಯಿಸಿ (+)