ಅದೃಷ್ಟ ಚೀಟಿ: ಬಹುಮಾನ ವಿತರಣೆ

7

ಅದೃಷ್ಟ ಚೀಟಿ: ಬಹುಮಾನ ವಿತರಣೆ

Published:
Updated:

ಸುಬ್ರಹ್ಮಣ್ಯ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 43ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಅದೃಷ್ಟ ಚೀಟಿ ಬಹುಮಾನ ಯೋಜನೆಯಲ್ಲಿ ಪ್ರಥಮ ಬಹುಮಾನ ಒಂದು ಪವನ್‌ನ ಚಿನ್ನದ ಸರವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಷಣ್ಮುಖ ಪ್ರಸಾದ ಭೋಜನ ಶಾಲೆಯ ಸಿಬ್ಬಂದಿ ರವಿ ಕುಮಾರ್ ಕೊಣಾಜೆ ಪಡೆದುಕೊಂಡಿದ್ದಾರೆ.ಈ ಬಹುಮಾನವನ್ನು ಭಾನುವಾರ ನಿವೃತ್ತ ಪ್ರಾಂಶುಪಾಲ ಕೆ.ರಾಮ ಶರ್ಮ ವಿಜೇತರಿಗೆ ಹಸ್ತಾಂತರಿಸಿದರು. ಗಣೇಶೋತ್ಸವದ ಅದೃಷ್ಟ ಚೀಟಿ ಡ್ರಾವನ್ನು ಶನಿವಾರ ರಾತ್ರಿ ನಡೆಸಲಾಯಿತು. ಅತಿ ಹೆಚ್ಚು ಅದೃಷ್ಟ ಚೀಟಿ ವಿತರಿಸಿದ ಪೂರ್ವಾಧ್ಯಕ್ಷ ರವಿ ಕಕ್ಕೆಪದವು ಹಾಗೂ ದಿನೇಶ್ ಮೊಗ್ರ ಅವರನ್ನು ಹಾಗೂ ಶೇಖರ ಸುಬ್ರಹ್ಮಣ್ಯ, ಪ್ರಭಾಕರ ಕುಮಾರಧಾರ, ಹರೀಶ್, ಗಂಗಾಧರ್ ಎಸ್.ಎನ್ ಅವರಿಗೆ ಸ್ಮರಣಿಕೆ ನೀಡಿ ಸಮಿತಿಯ ಪ್ರಧಾನ ಸಂಚಾಲಕ ವೆಂಕಟ್ರಾಜ್ ಗೌರವಿಸಿದರು. ಆಕರ್ಷಕ ಗಜೇಂದ್ರ ಮೋಕ್ಷ ಸ್ತಬ್ಧಚಿತ್ರ ನಿರ್ಮಿಸಿದ ಭಾಸ್ಕರ್ ಮತ್ತು ರೋಹಿತ್ ಹಾಗೂ ಮಹಿಷಾಸುರಮರ್ಧಿನಿ ದೇವಿಯ ಸ್ತಬ್ಧಚಿತ್ರ ರಚಿಸಿದ ಸಚಿನ್ ಅವರನ್ನು ಗೌರವಿಸಲಾಯಿತು.ಪ್ರಧಾನ ಸಂಚಾಲಕ ಯಜ್ಞೇಶ್ ಆಚಾರ್, ಸಮಿತಿ ಅಧ್ಯಕ್ಷ ಚಂದ್ರಶೇಖರ ಚೆನ್ನಕಜೆ, ಉಪಾಧ್ಯಕ್ಷ ಗಿರಿಧರ್ ಸ್ಕಂದ, ಪೂರ್ವಾಧ್ಯಕ್ಷ ಉಮೇಶ್ ಕೆ.ಎನ್. ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry