ಅದ್ದೂರಿ ಕಲ್ಲೂರಿನ ಕಾರ್ತಿಕೋತ್ಸವ

7

ಅದ್ದೂರಿ ಕಲ್ಲೂರಿನ ಕಾರ್ತಿಕೋತ್ಸವ

Published:
Updated:

 


ಯಲಬುರ್ಗಾ: ತಾಲ್ಲೂಕಿನ ಸುಕ್ಷೇತ್ರ ಕಲ್ಲೂರಿನ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ ಅದ್ದೂರಿಯಾಗಿ ಜರುಗಿತು. ಕಾರ್ತಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಗೂ ಸ್ವಾಮೀಜಿಗಳು ಪಾಲ್ಗೊಂಡು ಮಾತನಾಡಿದರು. ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಮಾತನಾಡಿ, ಕಾರ್ತಿಕೋತ್ಸವ ಕಾರ್ಯಕ್ರಮವೇ ಜಾತ್ರೆಯಂತೆ ಮೂರ‌್ನಾಲ್ಕು ದಿನಗಳ ಕಾಲ ನಡೆಯುವುದರಿಂದ ಹೆಚ್ಚು ಪ್ರಸಿದ್ದಿ ಪಡಿದಿದೆ. ಪ್ರಯುಕ್ತ ಆಚರಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸಲೆಂದೇ ದೂರದ ಸ್ಥಳಗಳಿಂದ ಭಕ್ತರು ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತ ಸಂಖ್ಯೆಗೆ ಅನುಗುಣವಾಗಿ ದೇವಸ್ಥಾನ ಅಭಿವೃದ್ಧಿಗೊಳ್ಳಬೇಕಾಗಿದೆ.ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರ ಈ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿ ಅಭಿವೃದ್ಧಿಗೊಳಿಸಬೇಕಾಗಿದೆ, ಪ್ರವಾಸಿ ತಾಣವನ್ನಾಗಿ ಮಾಡಿ ಹೆಚ್ಚಿನ ಪ್ರವಾಸಿಗರನ್ನು ದೇವಾಲಯದತ್ತ ಸೆಳೆಯುವ ಕೆಲಸ ಆಗಬೇಕಾಗಿದೆ ಎಂದರು. ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ತಹಸೀಲ್ದಾರ ದಿನೇಶ ಮಾತನಾಡಿದರು. ತಡರಾತ್ರಿ ಸಾಕಷ್ಟು ಪ್ರಮಾಣದ ಮದ್ದು ಸುಡುವ ಮೂಲಕ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು. ಜೊತೆಗೆ ನಂದಿಕೋಲು ಕುಣಿತ ಜನರನ್ನು ಆಕರ್ಷಸಿತು. ಮದ್ದುಸುಡುವ ಕಾರ್ಯವನ್ನು ಕಣ್ಣಾರೆ ವೀಕ್ಷಿಸಲು ಹಾಗೂ ದೇವರ ಎದುರಲ್ಲಿ ದೀಪಾರಾಧನೆಗೆ ದೂರ ದೂರದ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry