ಅದ್ದೂರಿ ಜಾತ್ರಾ ಮಹೋತ್ಸವ

7

ಅದ್ದೂರಿ ಜಾತ್ರಾ ಮಹೋತ್ಸವ

Published:
Updated:

ಶಿಕಾರಿಪುರ: ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದ ಪ್ರಸಿದ್ಧ ಮಣ್ಣು ಬಸವಣ್ಣಸ್ವಾಮಿ ದೇವರ ಜಾತ್ರಾ ಮಹೋತ್ಸವವು ಸೋಮವಾರ ಅದ್ದೂರಿಯಾಗಿ ನೆರವೇರಿತು.ಬೆಳಿಗ್ಗೆಯಿಂದಲೇ ಜಿಲ್ಲೆ ಹಾಗೂ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಎತ್ತಿನ ಬಂಡಿ ಹಾಗೂ ವಾಹನಗಳಲ್ಲಿ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.ಇಲ್ಲಿರುವ ಬಸವಣ್ಣನ ಮೂರ್ತಿ ಮಣ್ಣಿನಿಂದ ಇರುವುದರಿಂದ ಮಣ್ಣು ಬಸವಣ್ಣ ಎಂದು ಖ್ಯಾತಿ ಪಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ಹಿರಿಯರು ಇತಿಹಾಸ ಬಗ್ಗೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಎಸ್. ಶಾಂತವೀರಪ್ಪಗೌಡ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರುದ್ರಪ್ಪ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಸೈನಿಕ ಬಸವರಾಜಪ್ಪ, ರವೀಂದ್ರ, ಸದಸ್ಯ ಶ್ರೀಪತಿ, ದೇವಸ್ಥಾನ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಚೌಡಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry