ಶುಕ್ರವಾರ, ಏಪ್ರಿಲ್ 16, 2021
31 °C

ಅದ್ದೂರಿ ಬೀರದೇವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೂರ: ಅದೊಂದು ಸಂಭ್ರಮದ ಘಳಿಗೆ, ಗ್ರಾಮದ ಆರಾಧ್ಯದೈವ ಬೀರದೇವರ ಆರಾಧನೆ ಜೊತೆಗೆ ಮೇಳೈಸಿದ ಭಕ್ತಿಯ ಪರಾಕಾಷ್ಠೆಯ ವೈಭವ. ಗ್ರಾಮದಾದ್ಯಂತ ಸುಣ್ಣ, ಬಣ್ಣದ ಚಿತ್ತಾರ. ಪ್ರತಿ ಮನೆಗಳ ಮುಂದೆ ಭಕ್ತಾದಿಗಳ ಸ್ವಾಗತಕ್ಕೆ ರಂಗೋಲಿಯ ಚಿತ್ತಾರ. ಭಂಡಾರದ ಭವ್ಯತೆಯಿಂದ ಕೂಡಿದ್ದ ಜಾತ್ರೆಗೆ ಹಬ್ಬದ ಕಳೆ,~ ಚಾಂಗ ಭಲೋ~ ಎಂಬ ಮುಗಿಲು ಮುಟ್ಟುವ ಭಕ್ತಿಯ ಹರ್ಷೋದ್ಘಾರ ಅಲ್ಲಿ ಎಲ್ಲೆಯನ್ನು ಮೀರಿತ್ತು.ಸಮರ್ಪಕ ಮಳೆ-ಬೆಳೆ ಆಗದಿದ್ದರೂ ದೇವನ ಜಾತ್ರೆ ಜರುಗಿತು. ಭಕ್ತರು ಪರಸ್ಪರ ಭಂಡಾರ ಎರೆಚಿದರು. ಭಂಡಾರದಲ್ಲಿ  ಮಿಂದೆದ್ದ ಭಕ್ತ ಪರಿವಾರದಿಂದಾಗಿ ಗ್ರಾಮದ ತುಂಬೆಲ್ಲ ಭಂಡಾರದ ಚಿತ್ತಾರವೇ ಮೂಡಿತ್ತು. ಇದು ಸಮೀಪದ ಕುಳಗೇರಿ ಗ್ರಾಮದಲ್ಲಿ ಬೀರದೇವರ ಜಾತ್ರೆ ಕಾಲಕ್ಕೆ ಕಂಡುಬಂದ ಸಂಭ್ರಮದ ಚಿತ್ರಣ.ಗ್ರಾಮದ ಪ್ರತಿ ಮನೆಯಲ್ಲಿ ಬಂಧುಗಳ ಹರ್ಷದ ಹೊನಲು ಮನೆ ಮಾಡಿತ್ತು. ರಸಪೂರಿ ಭೋಜನದ ಸವಿರುಚಿ ಉಂಡು, ಭಕ್ತಿಯ ಭಂಡಾರ ಎರಚಾಟದಲ್ಲಿ ಪಾಲ್ಗೊಂಡ ಬಂಧುಗಳು ಒಂದೆಡೆಯಾದರೆ ಜಾತ್ರೆಗೆ ಬಂದ ಅತಿಥಿ ಮಹೋದಯರಿಗೆ ಚಹ-ಫಳಹಾರ ಮಾಡಿಸುವ ಗ್ರಾಮದ ಪ್ರಮುಖರು ಮತ್ತೊಂದೆಡೆ ಲಗು ಬಗೆ ಕಂಡಿತು.ಪ್ರತಿ ವರ್ಷ ದೀಪಾವಳಿಯ ಅಮವಾಸ್ಯೆ ನಂತರ ಕಾರ್ತಿಕ ಶುದ್ಧ ದ್ವಿತೀಯ ದಿನ ಜರುಗುವ ಈ ಭರಮದೇವರ ಜಾತ್ರೆಯು ಈ ಭಾಗದಲ್ಲಿ ತನ್ನದೇ ವಿಶಿಷ್ಟತೆ ಪಡೆದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.